ಚಾಮರಾಜನಗರ : ಕೊರೊನಾ ಸಂಕಷ್ಟದಲ್ಲಿ ರಾಜ್ಯ ತತ್ತರಿಸಿ ಹೋಗಿದೆ. ಸಾಲದಕ್ಕೆ ಮಹಾ ಮಳೆ ಬೇರೆ ಇದರ ಮಧ್ಯೆ ಜನರ ಹುಚ್ಚಾಟವು ಹೆಚ್ಚಾಗಿದೆ.
ಹೌದು ಲಾಕ್ ಡೌನ್ ನಿಂದ ಕಳೆದ ಏಳೆಂಟು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಜನ ಈಗ ಪ್ರವಾಸಿ ತಾಣಗಳತ್ತ ಮುಖ ಮಾಡ್ತಿದ್ದಾರೆ.
ರಾಜ್ಯದ ಪ್ರವಾಸಿ ತಾಣಗಳಲ್ಲಿ ತಂಡೊಪತಡವಾಗಿ ಪ್ರವಾಸಿಗರು ಮಜಾ ಮಾಡುತ್ತಿದ್ದಾರೆ.
ಇನ್ನೂ ಮೋಜು ಮಸ್ತಿಯ ಮೂಡ್ ನಲ್ಲಿರೋ ಜನ ಮೈಮರೆತಿದ್ದಾರೆ ಇದನ್ನೇ ಬಂಡವಾಳ ಮಾಡ್ಕೊಂಡಿರೋ ಕೆಲವರು ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ.
ಹೌದು. ಕಾವೇರಿ ಮೈದುಂಬಿ ಹರಿಯುತ್ತಿದ್ದು ಕೊಳ್ಳೆಗಾಲದ ಭರಚುಕ್ಕಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಇಲ್ಲಿನವರು ಪ್ರವಾಸಿಗರಿಗೆ ತೆಪ್ಪದ ಸವಾರಿ ನಡೆಸುತ್ತಿದ್ದಾರೆ.
ಭರಚುಕ್ಕಿ, ಮಧ್ಯರಂಗನಾಥಸ್ವಾಮಿ, ಶಿಂಷಾದ ಮಾರಮ್ಮ, ವೆಸ್ಲಿ ಸೇತುವೆ ವೀಕ್ಷಣೆಗೆ ಬರುವ ಪ್ರವಾಸಿಗರು ತೆಪ್ಪದ ಸವಾರಿ ಮಾಡ್ತಿದ್ದಾರೆ.
ಕೆಲವು ವರ್ಷಗಳ ಹಿಂದೆಯೇ ಇಲ್ಲಿ ತೆಪ್ಪದ ಸವಾರಿಯನ್ನು ನಿಷೇಧಿಸಲಾಗಿದೆ.
ಆದರೆ ಇದನ್ನು ಲೆಕ್ಕಿಸದ ಕೆಲವರು ಜೀವ ರಕ್ಷಕಗಳನ್ನು ತೊಡದೆ ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ಆದ್ರೆ ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಕಾವೇರಿಯಲ್ಲಿ ಲೀನವಾಗೋದು ಗ್ಯಾರೆಂಟಿಯಾಗಿದೆ
ವಿಷಯ ತಿಳಿದ ಚಾಮರಾಜನಗರ ಡಿ.ಸಿ. ಡಾ.ಎಂ.ಆರ್.ರವಿ ಕಾನೂನು ಬಾಹಿರವಾಗಿ ತೆಪ್ಪ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
PublicNext
28/10/2020 02:12 pm