ಕಾಸರಗೋಡು: ಎಡನೀರು ಮಠದ ಉತ್ತರಾಧಿಕಾರಿಯಾಗಿ ಶ್ರೀ ಸಚ್ಚಿದಾನಂದ ಭಾರತಿಯವರ ಸನ್ಯಾಸ ದೀಕ್ಷೆಯು ಕಂಚಿ ಕಾಮಕೋಟಿ ಪೀಠದ ಜಗದ್ಗುರುಗಳಿಂದ ನೆರವೇರಿತು.
ಕಂಚಿ ಶ್ರೀಗಳಿಂದ ನೂತನ ಪೀಠಾಧಿಪತಿಗಳಿಗೆ ಶ್ರೀ ಸಚ್ಚಿದಾನಂದ ಭಾರತಿ ಎಂದು ನಾಮಕರಣವಾಗುವುದರೊಂದಿಗೆ ಜಯರಾಮ ಮಂಜತ್ತಾಯರು ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇನ್ನು ಇಂದು ಬೆಳಿಗ್ಗೆ ಸಚ್ಚಿದಾನಂದ ಶ್ರೀಗಳು ಎಡನೀರು ಪುರ ಪ್ರವೇಶ ಮಾಡಿದ್ದಾರೆ. ಮತ್ತು ನಾಳೆ ಬುಧವಾರ ಎಡನೀರು ಮಠಾಧೀಶರಾಗಿ ಪೀಠಾರೋಹಣ ಸ್ವೀಕರಿಸಲಿದ್ದಾರೆ.
PublicNext
27/10/2020 04:30 pm