ಮುಂಬೈ: ಜನ ತಮ್ಮ ಯಾವುದೇ ಪ್ರೋಡೆಕ್ಟ್ ಸೇಲ್ ಮಾಡಲು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ.
ಕೆಲವು ಸೃಜನಾತ್ಮಕ ಕಾರ್ಯಗಳನ್ನು ಕೈಗೊಳ್ಳತ್ತಾರೆ ಆದ್ರೆ ಇಲ್ಲೊಂದು ಅಪಾರ್ಟ್ ಮೆಂಟ್ ನಿಯಮ ಕೇಳಿದ್ರೆ ನೀವಯ ಶಾಕ್ ಆಗೋದು ಗ್ಯಾರಂಟಿ.
ಹೌದು 3ಬಿಎಚ್ ಕೆ ಫ್ಲ್ಯಾಟ್ ಲಭ್ಯವಿದೆ. ಆದರೆ ಮುಸ್ಲಿಮರು, ನಾಯಿಗಳಿಗೆ ಪ್ರವೇಶವಿಲ್ಲ ಎಂದು ಮುಂಬೈ ನಗರದ ಅಪಾರ್ಟ್ ಮೆಂಟ್ ಮಾಲೀಕ ಹಾಕಿರುವ ಟು ಲೆಟ್ ಫಲಕ ಈಗ ವಿವಾದಕ್ಕೆ ಕಾರಣವಾಗಿದೆ.
3 ಬಿಎಚ್ ಕೆ ನಿವಾಸ ಭೋಗ್ಯಕ್ಕೆ ಲಭ್ಯವಿದೆ. ಆದರೆ ಮುಸ್ಲಿಮರು ಹಾಗೂ ನಾಯಿಗಳನ್ನು ಹೊಂದಿರುವವರಿಗೆ ಪ್ರವೇಶವಿಲ್ಲ ಎಂದು ಹಾಕಿದ್ದಾರೆ.
ಮುಂಬೈ ನಿವಾಸಿ ಅನ್ಮೆಶ್ ಪಾಟೀಲ್ ಈ ನಿಯಮಗಳು ಹಾಗೂ ಫ್ಲ್ಯಾಟ್ ನ ಚಿತ್ರವನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗಿದೆ. ವರ್ಣಬೇಧ ನೀತಿಗೆ ಇದೊಂದು ಉದಾಹರಣೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತೆ ರಾಣಾ ಅಯ್ಯುಬ್ ಈ ಪೋಸ್ಟ್ ಶೇರ್ ಮಾಡಿ, ಮುಸ್ಲಿಮರು ಹಾಗೂ ನಾಯಿಗಳಿಗೆ ಪ್ರವೇಶವಿಲ್ಲ ಎಂಬುದು ಮುಂಬೈನ ಬಾಂದ್ರಾದಲ್ಲಿ ಸೊಗಸಾದ ವಿಳಾಸವಾಗಿದೆ.
ಇದು 20ನೇ ಶತಮಾನದ ಭಾರತ, ನಮ್ಮದು ಕೋಮುವಾದಿ ರಾಷ್ಟ್ರವಲ್ಲ. ಇದು ವರ್ಣಬೇಧ ನೀತಿಯಲ್ಲವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ಪಾಕಿಸ್ತಾನ ರಾಷ್ಟ್ರಪತಿ ಡಾ.ಆರೀಫ್ ಅಲ್ವಿ ಅವರ ಗಮನ ಸೆಳೆದಿದ್ದು, ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ, ವಿರೋಧ ಚರ್ಚೆಗಳು ನಡೆಯುತ್ತಿದೆ.
PublicNext
26/10/2020 11:02 pm