ಅರಮನೆಯಲ್ಲಿ ಶುರುವಾಗಿದೆ ವಿಜಯದಶಮಿ ಸಂಭ್ರಮ
ಮೈಸೂರು-ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಸರಳ ವಿಜಯದಶಮಿ ಆಚರಣೆಗಳು ಶುರುವಾಗಿವೆ.
ನಗರದ ಅರಮನೆ ಮುಂದೆ ಬೆಳಿಗ್ಗೆ 9-30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಾಗೂ ಹಸುಗಳು ಬಾಗಿಲ ಮುಂದೆ ಆಗಮಿಸಲಿವೆ. 9-45 ಕ್ಕೆ ಖಾಸ ಆಯುಧಗಳಿಗೆ ಪೂಜೆ ನೆರವೇರಲಿದೆ. ಪೂಜೆ ನಂತರ ಆಯುಧಗಳು ಭುವಮೇಶ್ವರಿ ದೇವಾಲಯಕ್ಕೆ ರವಾನೆಯಾಗಲಿವೆ. ನಂತರ ಭುವನೇಶ್ವರಿ ದೇವಸ್ಥಾನಕ್ಕೆ ತೆರಳಲಿರುವ ಯದುವೀರ್ ಬನ್ನಿಪೂಜೆ ಮಾಡಲಿದ್ದಾರೆ. ವಿಜಯಯಾತ್ರೆ ನಂತರ ಚಾಮುಂಡೇಶ್ವರಿ ಮೂರ್ತಿಯನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನಿಸಲಾಗುತ್ತದೆ.
ಈ ಬಾರಿ ಆಚರಣೆಯಾಗುತ್ತಿರುವ ಸರಳ ದಸರಾ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗುತ್ತಿದೆ. ಪ್ರತಿವರ್ಷ ದಸರಾ ಸಂಧರ್ಭದಲ್ಲಿ ಮೈಸೂರು ನಗರ ಲಕ್ಷಾಂತರ ಜನರಿಂದ ತುಂಬುತ್ತಿತ್ತು. ಕೊರೊನಾ ಕಾರಣದಿಂದ ಈ ಬಾರಿ ಮೈಸೂರು ದಸರಾ ಆಚರಣೆಗೆ ನೀರಸ ಪ್ರತಿಕ್ರಿಯೆ ಕಾಣುತ್ತಿದೆ. ಪ್ರತಿಬಾರಿಯೂ ನಡೆಯಬೇಕಿದ್ದ ವಜ್ರಮುಷ್ಟಿ ಕಾಳಗ ಈ ಬಾರಿ ನಡೆಯುತ್ತಿಲ್ಲ.
ಇಂದು ಮದ್ಯಾಹ್ನ 2.59ರಿಂದ 3.20ರವರೆಗಿನ ಮಕರ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ನಂದಿ ಧ್ವಜಕ್ಕೆ ಪೂಜೆ ನಡೆಯಲಿದೆ. ಮದ್ಯಾಹ್ನ 3.40ರಿಂದ 4.15ರ ಕುಂಭ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಯದುವೀರ್ ಅವರಿಂದ ಪುಷ್ಪಾರ್ಚನೆ ನಡೆಯಲಿದೆ. ಈ ಸಲದ ಜಂಬೂ ಸವಾರಿ ಕೇವಲ 300 ಮೀಟರ್ ನಡೆಯಲಿದೆ
ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಯದುವೀರ್ ನಾಡಿನ ಜನತೆಗೆ ನಾಡಹಬ್ಬದ ಶುಭಾಶಯ ಕೋರಿದ್ದಾರೆ.
PublicNext
26/10/2020 07:36 am