ಉಜಿರೆ- ರಾಜ್ಯದ ಪವಿತ್ರ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ 53 ನೇ ವರ್ಧಂತಿ ಮಹೋತ್ಸವ ಪಟ್ಟಾಭಿಷೇಕ ಇಂದು ನಡೆಯಲಿದೆ. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ 21ನೇ ಧರ್ಮಾಧಿಕಾರಿಯಾದ ಅವರು ಧರ್ಮಸ್ಥಳ ತೀರ್ಥಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
1948ರ ನವೆಂಬರ್ 25 ರಂದು ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಹಾಗೂ ರತ್ನಮ್ಮ ಹೆಗ್ಗಡೆ ದಂಪತಿಯ ಪುತ್ರರಾಗಿ ಜನಿಸಿದ ವೀರೇಂದ್ರ ಕುಮಾರ್ ಅವರಿಗೆ ಮೂವರು ಸಹೋದರರು ಹಾಗೂ ಓರ್ವ ಸಹೋದರಿ ಇದ್ದಾರೆ. ಧರ್ಮಪತ್ನಿ ಹೇಮಾವತಿ ಹೆಗ್ಗಡೆ.
2017ರ ಅಕ್ಟೋಬರ್ 24ರಂದು ಡಿ. ವೀರೇಂದ್ರ ಹೆಗ್ಗಡೆ ಅವರು ಧರ್ಮಾಧಿಕಾರಿಯಾಗಿ 50 ವರ್ಷಗಳ ಸೇವೆ ಪೂರೈಸಿದ್ದರು. ಈ ಹಿನ್ನಲೆಯಲ್ಲಿ ಒಂದು ವರ್ಷ ಸುವರ್ಣ ಮಹೋತ್ಸವ ಆಚರಿಸಲಾಗಿತ್ತು.
ಪ್ರಧಾನಿ ಅಭಿನಂದನೆ- ಇವರ ಕೈಂಕರ್ಯದಿಂದ ಧರ್ಮಸ್ಥಳ ಪವಿತ್ರ ಕ್ಷೇತ್ರವು ಸರ್ವತೋಮುಖ ಬೆಳವಣಿಗೆ ಕಂಡಿದೆ. ಸಮಾಜಕ್ಕಾಗಿ ಡಿ. ವೀರೇಂದ್ರ ಹೆಗ್ಗಡೆ ಅವರು ತ್ಯಾಗ ಮತ್ತು ತಪಸ್ಸಿನ ಜೀವನ ನಡೆಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
PublicNext
24/10/2020 08:51 am