ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಡಾಕ್‌ನಲ್ಲಿ ಚೀನಾ ಯೋಧ ವಶಕ್ಕೆ

ಲಡಾಕ್: ಭಾರತದ ಗಡಿಯೊಳಗೆ ಪ್ರವೇಶಿಸಿದ ಚೀನಾದ ಯೋಧರೊಬ್ಬರನ್ನು ಲಕಾಡ್‌ನ ಚುಮಾರ್–ಡೆಂಚೋಕ್ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.

ಚೀನಾ ಯೋಧ ಕಣ್ಣುತಪ್ಪಿನಿಂದ ಭಾರತದ ಭೂ ಪ್ರದೇಶದೊಳಗೆ ಬಂದಿರಬಹುದು. ಆದರೆ ಶಿಷ್ಟಾಚಾರದ ಪ್ರಕಾರ ಸೂಕ್ತ ಪ್ರಕ್ರಿಯೆಗಳು ಪೂರೈಸಿದ ಬಳಿಕ ಅವರನ್ನು ಚೀನಾ ಸೇನೆಗೆ ಒಪ್ಪಿಸಲಾಗುತ್ತದೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಚೀನಾ ಯೋಧನಿಗೆ ಆಮ್ಲಜನಕ ಸೇರಿದಂತೆ ವೈದ್ಯಕೀಯ ನೆರವು ನೀಡಲಾಗಿದೆ. ವಿಪರೀತ ಎತ್ತರ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳ ವಿರುದ್ಧ ರಕ್ಷಣೆಗಾಗಿ ಅವರಿಗೆ ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಸಹ ನೀಡಲಾಗಿದೆ ಎನ್ನಲಾಗಿದೆ.

Edited By : Vijay Kumar
PublicNext

PublicNext

19/10/2020 03:46 pm

Cinque Terre

65.28 K

Cinque Terre

1