ನವದೆಹಲಿ : ಕೇವಲ ಒಂದು ರೂಪಾಯಿ ನಾಣ್ಯದಿಂದ 25 ಲಕ್ಷ ರೂ. ಗಳಿಸಬಹುದು ಇದು ಅಚ್ಚರಿಯಾದ್ರು ನಿಜ.
ಹೌದು ಭಾರತದ ದೊಡ್ಡ ಆನ್ ಲೈನ್ ಮಾರುಕಟ್ಟೆ ಇಂಡಿಯಾ ಮಾರ್ಟ್ ಎಂಬ ಹರಾಜಿನಲ್ಲಿ ನೀವು ಒಂದು ರೂಪಾಯಿ ನಾಣ್ಯ ವಿನಿಮಯ ಮಾಡಿಕೊಳ್ಳಬಹುದು. ಇದರಿಂದ ಲಕ್ಷ್ಯಾಧಿಪತಿಯೂ ಆಗಬಹುದು.
ಒಂದು ರೂಪಾಯಿ ನಾಣ್ಯವಿದ್ದರೆ ಇದು ಸಾಧ್ಯವಾಗಲಿದೆ. 100 ವರ್ಷ ಹಿಂದಿನ 1 ರೂ. ನಾಣ್ಯವಿದ್ದರೆ 25 ಲಕ್ಷ ರೂ. ಗೆಲ್ಲಬಹುದು.
1913ರಲ್ಲಿ ಸರ್ಕಾರದಲ್ಲಿ ಚಾಲ್ತಿಯಲ್ಲಿದ್ದ ಒಂದು ರೂಪಾಯಿ ನಾಣ್ಯ ಸಿಲ್ವರ್ ನಿಂದ ತಯಾರಿಸಲಾಗಿದ್ದು, ವಿಕ್ಟೋರಿಯನ್ ಯುಗಕ್ಕೆ ಸೇರಿದ್ದಾಗಿದೆ.
ಹೀಗಾಗಿ 1913ರಲ್ಲಿ ತಯಾರಾದ 1 ರೂಪಾಯಿ ನಾಣ್ಯ ಇದೀಗ ನಿಮಗೆ ಲಾಟರಿಯಂತಾಗಿದೆ.
ಇಂಡಿಯಾ ಮಾರ್ಟ್ (IndiaMart) ವೆಬ್ ಸೈಟ್ ಗೆ ಭೇಟಿ ನೀಡಿ, ನಿಮ್ಮದೇ ಖಾತೆಯನ್ನು ತೆರೆಯಿರಿ. ಬಳಿಕ ಮಾರಾಟಗಾರನೆಂದು ನೋಂದಾಯಿಸಿಕೊಳ್ಳಿ.
ನೋಂದಣಿ ಮಾಡಿದ ಬೆನ್ನಲ್ಲೇ ನಿಮ್ಮ ಬಳಿಯಿರುವ ನಾಣ್ಯದ ಚಿತ್ರವನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿ.
ನಾಣ್ಯವು ಮಾರಾಟಕ್ಕಿದೆ ಎಂದು ಬರೆಯಿರಿ. ಯಾರು ಯಾರು ಪ್ರಾಚೀನ ನಾಣ್ಯಗಳಿಗೆ ಹುಡುಕಾಡುತ್ತಿರುತ್ತಾರೋ ಅವರು ವೆಬ್ ಸೈಟ್ ಗೆ ಭೇಟಿ ನೀಡುತ್ತಾರೆ.
ನಿಮ್ಮ ನಾಣ್ಯವನ್ನು ನೋಡಿದ ಬಳಿಕ ನಿಮ್ಮನ್ನು ಆನ್ ಲೈನ್ ಮೂಲಕ ಸಂಪರ್ಕಿಸಲಿದ್ದಾರೆ.
ನಿಮಗೆ ಹಣ ನೀಡಿ ನಾಣ್ಯ ಕೊಳ್ಳಲಿದ್ದಾರೆ.
PublicNext
17/10/2020 05:51 pm