ಅವಸರವೇ ಅಪಘಾತಕ್ಕೆ ಕಾರಣ ಎಂದು ಟ್ರ್ಯಾಕ್ಟರ್, ಲಾರಿ, ಕಾರ್‌ಗಳ ಮೇಲೆ ಬರೆದಿರುವುದನ್ನ ನೋಡಿರುತ್ತೇವೆ. ಆದ್ರೆ ಓರ್ವ ಚಾಲಕ ಅವಸರಕ್ಕೆ ಬಿದ್ದು, ಹುಂಬತನ ತೋರಿದ ಪರಿಣಾಮ ಟ್ರ್ಯಾಕ್ಟರ್ ನದಿಯಲ್ಲಿ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಹೌದು.. ಭಾರೀ ಮಳೆಯಿಂದಾಗಿ ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಕರಾಜಗಿ ಗ್ರಾಮದ ಬಳಿಯ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿತ್ತು. ಈ ವೇಳೆ ಅಲ್ಲಿಗೆ ಹಾಲಿನ ಡಬ್ಬಿಗಳನ್ನು ಹೊತ್ತ ಟ್ರಾಕ್ಟರ್ ಬಂದಿತ್ತು. ನದಿ ವೇಗವಾಗಿ ಹರಿಯುತ್ತಿದ್ದರೂ ಲೆಕ್ಕಿಸದೇ ಚಾಲಕ ಟ್ರ್ಯಾಕ್ಟರ್ ಸೇತುವೆ ದಾಟಲು ಮುಂದಾಗಿದ್ದ. ಇನ್ನೇನು ಟ್ರ್ಯಾಕ್ಟರ್ ದಡಕ್ಕೆ ಸಮೀಸುತ್ತಿದ್ದಂತೆ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಹಾಗೂ ಟ್ರೈಲರ್‌ನಲ್ಲಿದ್ದ ಓರ್ವ ಯುವಕ ತಕ್ಷಣವೇ ಸೇತುವೆ ಮೇಲೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
15/10/2020 08:07 pm