ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ರಾಜ್ಯದಲ್ಲಿ ಸಿನಿಮಾ ಮಂದಿರ ಓಪನ್ : ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಲಾಕ್ ಡೌನ್ ನಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ನಾಳೆ ಮರು ಆರಂಭವಾಗಲಿವೆ.

ಅದಕ್ಕಾಗಿ ಎಲ್ಲಾ ಸಿನಿಮಾ ಹಾಲ್ ಗಳನ್ನ ಸ್ವಚ್ಛಗೊಳಿಸಿ ಸಿದ್ದಗೊಳಿಸಲಾಗಿದೆ.

ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ಮಾರ್ಗಸೂಚಿಯ ಹೈಲೈಟ್ಸ್:

* ಕನಿಷ್ಠ 6 ಅಡಿ ಅಂತರ ಕಡ್ಡಾಯ

* ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ

* ಉಗುಳುವುದು ನಿಷಿದ್ಧ

* ಆರೋಗ್ಯ ಸೇತು ಆಪ್ ಇರಬೇಕು

* ನಿಯಮಿತವಾಗಿ ಮಾನವ ಸಂಪರ್ಕಕ್ಕೆ ಬರೋ ಎಲ್ಲ ಸ್ಥಳಗಳ ಸ್ಯಾನಿಟೈಸಿಂಗ್* ಫುಡ್ ಕೌಂಟರ್ ಗಳನ್ನು ಹೆಚ್ಚಿಸಬೇಕು

* ಪ್ಯಾಕ್ ಆಗಿರುವ ಆಹಾರ, ಸ್ನ್ಯಾಕ್ಸ್ ಗಳ ಮಾರಾಟ

* ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್

* ರೋಗಲಕ್ಷಣ ರಹಿತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ

* ಪ್ರತಿ ಚಿತ್ರ ಪ್ರದರ್ಶನಗಳ ಬಳಿಕ ಸಾಕಷ್ಟು ಸಮಯ ಇರಬೇಕು

* ಪ್ರವೇಶ, ನಿರ್ಗಮನ ವೇಳೆ ದೈಹಿಕ ಅಂತರ ಪಾಲನೆ

* ಟಿಕೆಟ್ಗೆ ಹಣಪಾವತಿಗೆ ಡಿಜಿಟಲ್ ಪೇಮೆಂಟ್ಗೆ ಆದ್ಯತೆ

* ಟಿಕೆಟ್ ವಿತರಿಸುವಾಗ ವೀಕ್ಷಕರ ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಬೇಕು

* ಸಿನಿಮಾ ಹಾಲ್ ಒಳಗೆ ಆಹಾರ ಸೇವನೆ ನಿಷಿದ್ಧ

Edited By : Nirmala Aralikatti
PublicNext

PublicNext

14/10/2020 09:35 pm

Cinque Terre

87.49 K

Cinque Terre

3