ನವದೆಹಲಿ: ಅಕ್ಟೋಬರ್ 20ರಿಂದ ಹಾಗೂ ನವೆಂಬರ್ ಕೊನೆಯವರೆಗೆ ದೀಪಾವಳಿ, ದಸರಾ ಸೇರಿ ಸಾಲು ಸಾಲು ಹಬ್ಬಗಳಿವೆ. ಹೀಗಾಗಿ ರೈಲು ಪ್ರಯಾಣಿಕರ ದಟ್ಟಣೆ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ರೈಲ್ವೇ ಸಚಿವಾಲಯವು 392 ವಿಶೇಷ ರೈಲುಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಅ.20 ರಿಂದ ನ.30ರ ವರೆ 392 ವಿಶೇಷ ರೈಲುಗಳನ್ನು ಓಡಿಸುವುದಾಗಿ ರೈಲ್ವೇ ಸಚಿವಾಲಯ ಹೇಳಿದೆ. ದುರ್ಗಾಪೂಜೆ, ದಸರಾ, ದೀಪಾವಳಿ ಹಾಗೂ ಛತ್ ಪೂಜೆ ಮುಂತಾದ ಹಬ್ಬಗಳು ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷ ರೈಲುಗಳು ಕೋಲ್ಕತ್ತಾ, ಪಾಟ್ನಾ, ವಾರಣಾಸಿ ಹಾಗೂ ಲಕ್ನೋ ಮುಂತಾದ ಕಡೆಗಳಲ್ಲಿ ಸಂಚರಿಸಲಿವೆ. ಸಾಮಾನ್ಯ ರೈಲಿನ ದರವೇ ವಿಶೇಷ ರೈಲಿಗೆ ಅನ್ವಯವಾಗಲಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
PublicNext
14/10/2020 12:48 pm