ಮಥುರಾ: ಭೂಮಿಯ ಮೇಲೆ ಅಂದ್ರೆ ವೇದಿಕೆ, ಮೈದಾನ ಸೇರಿದಂತೆ ವಿವಿಧೆಡೆ ಯೋಗ ಪ್ರದರ್ಶನ ಮಾಡಿ ಯೋಗದಿಂದಲೇ ಗುರುತಿಸಿಕೊಂಡ ಯೋಗ ಗುರು ಬಾಬಾ ರಾಮ್ ದೇವ್ ಆನೆಯ ಮೇಲೆ ಯೋಗಾಸನ ಮಾಡಲು ಹೋಗಿ ಉರುಳಿಬಿದ್ದು ನಗೆಪಾಟಲಿಗೀಡಾಗಿದ್ದಾರೆ.
ಈ ಘಟನೆ ಮಥುರಾದ ಮಹಾವನದಲ್ಲಿರುವ ರಾಮನರೇತಿ ಆಶ್ರಮದಲ್ಲಿ ಸಂಭವಿಸಿದೆ.
ಆನೆ ಮೇಲೆ ಕುಳಿತು ಯೋಗ ಭಂಗಿಗಳನ್ನು ರಾಮದೇವ್ ಪ್ರದರ್ಶನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆನೆ ಅಲುಗಾಡಿದ್ದೇ ಅವರು ಬೀಳಲು ಕಾರಣವಾಗಿದೆ.
22 ಸೆಕೆಂಡುಗಳ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
PublicNext
13/10/2020 10:58 pm