ಸಾಮಾಜಿಕ ಜಾಲತಾಣದಲ್ಲಿ ತನಿಷ್ಕ್ ಜ್ಯುವೆಲರಿ ಜಾಹಿರಾತಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯ ತನ್ನ ಜಾಹಿರಾತನ್ನು ರದ್ದುಗೊಳಿಸಿದೆ.
ಹಿಂದೂ-ಮುಸ್ಲಿಂ ದಂಪತಿಯ ಜಾಹಿರಾತು ಮೂಲಕ ತನಿಷ್ಕ್ ಜ್ಯುವೆಲರಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಜಾಹಿರಾತುವಿನಲ್ಲಿ ಮುಸ್ಲಿಂ ಅತ್ತೆ ಹಿಂದೂ ವಧುವಿಗೆ ಸೀಮಂತ ಮಾಡುತ್ತಿರುವುದನ್ನು ಚಿತ್ರೀಕರಿಸಲಾಗಿದೆ.
ಇನ್ನು ಈ ವಿಡಿಯೋ ವನ್ನು ಟ್ವೀಟ್ ಮಾಡಿದ್ದ ತನಿಷ್ಕ್, ತಮ್ಮ ಸ್ವಂತ ಮಗುವಿನಂತೆ ಪ್ರೀತಿಸುವ ಕುಟುಂಬದಲ್ಲಿ ಅವಳು ಮದುವೆಯಾಗಿದ್ದಾಳೆ.
ಅವಳಿಗೆ ಮಾತ್ರ, ಮುಸ್ಲಿಂ ಕುಟುಂಬ ಸಾಮಾನ್ಯವಾಗಿ ಮಾಡದ ಕಾರ್ಯಕ್ರಮವನ್ನು ಆಚರಿಸಿದೆ.
ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಎರಡು ವಿಭಿನ್ನ ಧರ್ಮಗಳ ಸುಂದರ ಸಂಗಮ ಎಂದು ಅಡಿ ಬರಹ ನೀಡಿತ್ತು.
ಈ ವಿಡಿಯೋ ನೋಡಿದ ಟ್ವೀಟರಿಗರು ಇಂತಹ ಜಾಹಿರಾತು ಮೂಲಕ ತನಿಷ್ಕ್ ಜ್ಯುವೆಲರಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದೆ.
ಅಲ್ಲದೆ ಲವ್ ಜಿಹಾದ್ ಒಂದು ಇಸ್ಲಾಮೋಫೋಬಿಕ್ ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಪುರುಷರು ಇತರ ಧರ್ಮಗಳ ಮಹಿಳೆಯರನ್ನು ಪ್ರೀತಿಸುವಂತೆ ಮಾಡುತ್ತಾರೆ.
ನಂತರ ಮತಾಂತರವನ್ನು ಉತ್ತೇಜಿಸಲು ಅವರನ್ನು ಮದುವೆಯಾಗುತ್ತಾರೆ ಎಂದು ಟ್ವೀಟ್ ಮಾಡಿ ಟ್ರೋಲ್ ಮಾಡುತ್ತಿದ್ದರು.
ಇಂತಹ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿರುವ ತನಿಷ್ಕ್ ಜ್ಯುವೆಲರಿಯನ್ನು ಬಹಿಷ್ಕರಿಸುವಂತೆ ಟ್ವೀಟರಿಗರು ಕರೆ ನೀಡಿದ್ದರು.
ಇನ್ನು ವಿಡಿಯೋ ಸಂಬಂಧ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತನಿಷ್ಕ್ ಸದ್ಯ ಈ ವಿಡಿಯೋವನ್ನು ಡಿಲೀಟ್ ಮಾಡಿದೆ.
ಬಾಯ್ ಕಾಟ್ ತನಿಷ್ಕ್ ಟ್ರೆಂಡ್ ಆಗುತ್ತಿದ್ದಂತೆ ಕೇರಳ ಸಂಸದ ಶಶಿ ತರೂರ್ ಟ್ವೀಟ್ ಮಾಡಿ ತನಿಷ್ಕ್ ಜ್ಯುವೆಲರಿಯ ಜಾಹಿರಾತನ್ನು ಬೆಂಬಲಿಸಿದ್ದಾರೆ.
PublicNext
13/10/2020 04:47 pm