ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಕಿಂಗ್ ಹೋಗಿದ್ದ ಹುಡುಗಿ ನಾಪತ್ತೆ: 4 ದಿನದ ಬಳಿಕ ಪೊದೆಯಲ್ಲಿ ಪತ್ತೆ

ಹೈದರಾಬಾದ್ : 16 ಪೋರಿ ಮನೆಯಿಂದ ಹೊರಹೋಗಿ ನಾಲ್ಕು ದಿನಗಳ ನಂತರ ಸುರಕ್ಷಿತವಾಗಿ ಮರಳಿ ಮನೆಗೆ ವಾಪಸ್ಸಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಲಾರಾ ರವಿಕುಮಾರ್ ಎನ್ನುವ ಹುಡುಗಿ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಳು. ಹೀಗಾಗಿ ಆಕೆಯ ತಂದೆ ಬೈದಿದ್ದಾರೆ. ನಂತರ ಅ.7 ರಂದು ವಾಕ್ ಮಾಡಲು ಮನೆಯಿಂದ ಹೋಗಿದ್ದ ಆಕೆ ಕಾಣೆಯಾಗಿದ್ದಳು.

ಆದ್ರೆ 4 ದಿನದ ನಂತ್ರ ಲಾರಾ ಮನೆಗೆ ಮರಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?

ಹಯಾತ್ ನಗರ ನಿವಾಸಿಯಾಗಿದ್ದ ಲಾರಾ ಹೆಚ್ಚಾಗಿ ಫೋನ್ ಬಳಸುತ್ತಿದ್ದಕ್ಕೆ ತಂದೆ ಬೈದಿದ್ದಾರೆ. ಆಗ ತಂದೆ-ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಲಾರಾ ತನ್ನ ಮೂರು ನಾಯಿಗಳೊಂದಿಗೆ ವಾಕ್ ಮಾಡಲು ಮನೆಯಿಂದ ಹೊರ ಹೋಗಿದ್ದಾಳೆ. ಅವಳು ವಾಕಿಂಗ್ ಗೆ ಹೋದ 10 ನಿಮಿಷಗಳ ನಂತರ ಲಾರಾ ಕಾಣೆಯಾಗಿದ್ದನ್ನು ಕುಟುಂಬ ಗಮನಿಸಿದೆ.

ತನ್ನ ಮನೆಯಿಂದ ಹೊರಡುವ ಸಮಯದಲ್ಲಿ ಲಾರಾ ತನ್ನ ಫೋನ್, ಪರ್ಸ್ ಯಾವುದನ್ನೂ ತೆಗೆದುಕೊಂಡು ಹೋಗಿರಲಿಲ್ಲ.

ಹೀಗಾಗಿ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ.

ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಗಳನ್ನು ಪತ್ತೆ ಹಚ್ಚಲು ಪೋಷಕರು ಸಹಾಯ ಕೇಳಿದ್ದರು.

ಕೂಡಲೇ ಪೊಲೀಸರು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಲಾರಾ ಮಾತ್ರ ಎಲ್ಲೂ ಪತ್ತೆಯಾಗಿರಲಿಲ್ಲ.

ಲಾರಾ ನಮ್ಮ ಮನೆಯ ಸಮೀಪ ಪೊದೆಗಳ ನಡುವೆ ಅಡಗಿಕೊಂಡಿದ್ದಳು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

12/10/2020 10:49 am

Cinque Terre

51.57 K

Cinque Terre

0