ನವದೆಹಲಿ : ವಿಪರ್ಯಾಸ ನೋಡಿ ಸಹೋದರರಿಬ್ಬರ ಬದುಕಿನಲ್ಲಿ ಹೇಗೆಲ್ಲಾ ನಡೆಯುತ್ತಿದೆ ಎನ್ನುವುದಕ್ಕೆ ಅಂಬಾನಿ ಬ್ರದರ್ಸ್ ಗಳೆ ಸಾಕ್ಷಿ..
ಹೌದು ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ ದಿನೇ ದಿನೆ ಶ್ರೀಮಂತರಾಗುತ್ತ ಸಾಗಿದ್ರೆ ಇತ್ತ ಅವರ ಸೋದರ ಅನಿಲ್ ಅಂಬಾನಿ ಆರ್ಥಿಕವಾಗಿ ದುರ್ಬಲರಾಗುತ್ತಾ ಹೋಗುತ್ತಿದ್ದಾರೆ.
ಬ್ಯಾಂಕ್ ಗಳ ಸಾಲಗಳನ್ನು ಮರುಪಾವತಿಸಲು ತಮ್ಮ ಆಭರಣಗಳು ಹಾಗೂ ಆಸ್ತಿಗಳನ್ನೆಲ್ಲ ಮಾರಿದ್ದಾರೆ.
ಇದರ ಮಧ್ಯೆ ಗಾಯದ ಮೇಲೆ ಬರೆ ಎಂಬಂತೆ ಇದೀಗ ಅನಿಲ್ ಮೇಲೆ ಮತ್ತೊಂದು ಆರ್ಥಿಕ ಹೊಡೆತ ಬಿದ್ದಿದೆ.
ನಷ್ಟದ ಸುಳಿಯಲ್ಲಿ ಸಿಲುಕಿದ ಅನಿಲ್ ಅಂಬಾನಿಗೆ, ಈಗ ರಿಲಯನ್ಸ್ ನೇವಲ್ ಆಯಂಡ್ ಇಂಜಿನಿಯರಿಂಗ್ ಲಿಮಿಟೆಡ್ (ಆರ್ ಎನ್ ಇಎಲ್) ಜತೆ ಮಾಡಿಕೊಂಡಿದ್ದ 2,500 ಕೋಟಿ ರೂ.ಗಳ ಒಪ್ಪಂದವನ್ನು ರಕ್ಷಣಾ ಸಚಿವಾಲಯ ರದ್ದುಗೊಳಿಸಿದೆ.
ಅನಿಲ್ ನೇತೃತ್ವದ ರಿಲಯನ್ಸ್ ಗ್ರೂಪ್ ನವರು ಭಾರತೀಯ ನೌಕಾಪಡೆಗೆ ಐದು ಗಸ್ತು ಹಡಗುಗಳನ್ನು ತಯಾರಿಸಿಕೊಡಲು 2011ರಲ್ಲಿ ರಕ್ಷಣಾ ಸಚಿವಾಲಯದ ಜತೆ ಒಪ್ಪಂದ ಮಾಡಿಕೊಂಡಿದ್ದರು.
ಆದರೆ ಸಕಾಲಕ್ಕೆ ಹಡಗುಗಳನ್ನು ತಯಾರಿಸಿ ಪೂರೈಸುವುದು ರಿಲಯನ್ಸ್ ಕಂಪನಿಗೆ ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತ ರಕ್ಷಣಾ ಸಚಿವಾಲಯ ಒಪ್ಪಂದವನ್ನು ರದ್ದುಪಡಿಸಿದೆ.
ಅನಿಲ್ ಅವರ ಕಂಪನಿ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಅಹಮದಾಬಾದ್ ಪೀಠದಲ್ಲಿ ಈಗಾಗಲೇ ದಿವಾಳಿ ಪ್ರಕ್ರಿಯೆ ನಡೆಯುತ್ತಿದೆ.
PublicNext
10/10/2020 06:49 pm