ನವದೆಹಲಿ : ಭಾರತೀಯ ರೈಲ್ವೆ ಇಲಾಖೆ ರೈಲು ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ನೀಡಿದೆ.
ಇನ್ಮುಂದೆ ರೈಲು ನಿಲ್ದಾಣದಿಂದ ಹೊರಡುವ ಕೇವಲ ಐದು ನಿಮಿಷದ ಮುಂಚೆ ಟಿಕೆಟ್ ಕಾಯ್ದಿರಿಸಲು ಮತ್ತು ರದ್ದುಗೊಳಿಸುವ ಅವಕಾಶ ಕಲ್ಪಿಸಿದೆ.
ರೈಲ್ವೆ ಇಲಾಖೆಯ ಈ ಹೊಸ ಕಾನೂನು ಕೋವಿಡ್ ಸಂದರ್ಭದಲ್ಲಿ ಸಂಚರಿಸುವ ಎಲ್ಲಾ ವಿಶೇಷ ರೈಲುಗಳಿಗೆ ಅನ್ವಯಿಸಲಿದೆ.
ಅಲ್ಲದೇ ಇಂದಿನಿಂದಲೇ (ಅಕ್ಟೋಬರ್ 10,2020) ಈ ಕಾನೂನು ಜಾರಿಯಾಗಲಿದೆ ಎಂದು ತಿಳಿಸಿದೆ.
ಭಾರತೀಯ ರೈಲ್ವೆ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ರೈಲ್ವೆ ವಲಯದ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರೈಲು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲು ಹೊರಡುವ ನಿಗದಿತ ಸಮಯಕ್ಕಿಂತ 30 ನಿಮಿಷಗಳ ಮೊದಲು ಎರಡನೇ ರಿಸರ್ವೇಶನ್ ಪಟ್ಟಿ ಸಿದ್ದಪಡಿಸಲು ನಿರ್ಧಾರ ತೆಗೆದುಕೊಂಡಿದ್ದು, ಇದರಿಂದಾಗಿ ರೈಲು ಹೊರಡುವ 5 ನಿಮಿಷದ ಮೊದಲು ಟಿಕೆಟ್ ಬುಕ್ಕಿಂಗ್ ಅಥವಾ ರದ್ದು ಮಾಡಬಹುದಾಗಿದೆ ಎಂದು ವಿವರಿಸಿದೆ.
PublicNext
10/10/2020 03:04 pm