ಲಕ್ನೋ: ರಾಮ ಜನ್ಮಭೂಮಿಗೆ ಬುಧವಾರ ಬಂದ ಬೃಹತ್ ಘಂಟೆಯ ಓಂಕಾರ ನಾದ ಸುಮಾರು 10 ಕಿ.ಮೀ. ದೂರದವರೆಗೂ ಕೇಳುತ್ತದೆ.
ತಮಿಳುನಾಡಿನ ಭಕ್ತರು ಅಯೋಧ್ಯೆಯ ರಾಮಮಂದಿರಕ್ಕೆ ಘಂಟೆಯನ್ನು ಕೊಡುಗೆ ನೀಡಿದ್ದಾರೆ. ಜೈ ಶ್ರೀರಾಮ್ ಕೆತ್ತನೆಯುಳ್ಳ ಘಂಟೆಯು 4.1 ಅಡಿ ಎತ್ತರವಿದ್ದು, 613 ಕೆಜಿ ತೂಗು ಹೊಂದಿದೆ. ಘಂಟೆಯ ಮೇಲೆ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತನ ಮೂರ್ತಿಯನ್ನು ಕೆತ್ತಲಾಗಿದೆ. ಸೆಪ್ಟೆಂಬರ್ 17ರಂದು ತಮಿಳುನಾಡಿನ ರಾಮೇಶ್ವರಂನಿಂದ 4,500 ಕಿ.ಮೀ ಮೆರವಣಿಗೆ ಮೂಲಕ ಬುಧವಾರ ಅಯೋಧ್ಯೆಗೆ ಬಂದು ತಲುಪಿದೆ.
PublicNext
09/10/2020 03:17 pm