ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನ್ನಭಾಗ್ಯ ಯೋಜನೆಯ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆ

ಮಂಡ್ಯ: ರಾಜ್ಯ ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ.

ಗುರುದೇವರಹಳ್ಳಿ ಕಾಲೋನಿಯ ನಿವಾಸಿಗಳಾದ ಹೋಟೆಲ್ ಪುಟ್ಟೇಗೌಡ, ಮಧು, ಸತ್ಯಮ್ಮ ಸೇರಿದಂತೆ ನೂರಾರು ಮಂದಿಗೆ ಅಕ್ಕಿ ವಿತರಣೆ ಮಾಡಲಾಗಿದೆ. ಅಕ್ಕಿಯನ್ನು ತೆಗೆದುಕೊಂಡು ಹೋಗಿದ್ದ ನಿವಾಸಿಗಳಿಗೆ ಅಚ್ಚರಿ ಕಾದಿತ್ತು. ಮನೆಗೆ ಹೋಗಿ ನೋಡಲಾಗಿ ಪ್ಲಾಸ್ಟಿಕ್ ರೀತಿಯ ಅಕ್ಕಿಕಾಳುಗಳು ಕಂಡು ಬಂದಿದೆ. ತಕ್ಷಣವೇ ಗ್ರಾಮಸ್ಥರು ಆಹಾರ ಇಲಾಖೆಯ ರಾಜಣ್ಣ ಎಂಬುವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿ ಪರಿಶೀಲಿಸಿ ಅಕ್ಕಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ತೆಗೆದುಕೊಂಡು ಹೋಗಿದ್ದು, ಅಕ್ಕಿ ಬಳಸದಂತೆ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

09/10/2020 07:30 am

Cinque Terre

55.42 K

Cinque Terre

3