ಗದಗ: ವರುಣಾಸುರನ ಅಟ್ಟಹಾಸಕ್ಕೆ ಗದಗ ಜಿಲ್ಲೆಯ ಜನ ನಲುಗಿ ಹೋಗಿದ್ದಾರೆ. ಬೆಟಗೇರಿ ಕರ್ನಲ್ ಪೇಟೆ ಶಾಂತಾಬಾಯಿ ಎಂಬ ವೃದ್ಧೆ ನೀರು ಹೊರಹಾಕಲು ಪರದಾಡ್ತಿದ್ದಾಳೆ.
70 ವರ್ಷದ ಅಜ್ಜಿ ಹಾಗೂ ಮೊಮ್ಮಗಳು ಇಬ್ಬರೇ ಇರೋದ್ರಿಂದ ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ ಅಂತ ಕಣ್ಣೀರಿಡ್ತಿದ್ದಾರೆ. ಮನೆಯೊಳಗೆ ಮಳೆ ನೀರಿನೊಂದಿಗೆ ಚರಂಡಿ ನೀರು ನುಗ್ಗುತ್ತಿದ್ದು, ದುರ್ವಾಸನೆ ಹರಡುತ್ತಿದೆ. ಒಂದು ನಿಮಿಷ ನಿಲ್ಲೋಕೆ ಆಗ್ತಿಲ್ಲ. ಎಷ್ಟೇ ಸ್ವಚ್ಛ ಮಾಡಿದರೂ ನಿತ್ಯ ಸುರಿಯುವ ಮಳೆಯಿಂದ ಪದೆ ಪದೆ ಇದೇ ಸಮಸ್ಯೆ ಎದುರಾಗ್ತಿದೆ. ಈ ಕಾಲೋನಿಯ ನೇಕಾರ ಕುಟುಂಬಗಳು ಹೊತ್ತಿನ ಊಟಕ್ಕೂ ಪರದಾಡ್ತಿವೆ. ಮಕ್ಕಳು, ವೃದ್ದರು, ಮಹಿಳೆಯರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಕಳೆದೊಂದು ವಾರದಿಂದ ನೇಕಾರರು ಉದ್ಯೋಗವಿಲ್ಲದೆ ನರಳಾಡ್ತಿದ್ದಾರೆ. ಎಲ್ಲೆಂದರಲ್ಲಿ ಮರ, ಮನೆಗಳು ಬಿದ್ದು, ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ. ಸಂತ್ರಸ್ತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
PublicNext
09/09/2022 09:42 am