ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನಕಪುರ : ಮಳೆಗೆ ಕೊಚ್ಚಿಹೋದ ಸ್ಮಶಾನಗಳು ತೇಲಿಬಂದ ಶವಗಳ ಅವಶೇಷ

ಕನಕಪುರ : ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಚಿಕ್ಕಮರಳವಾಡಿ ಗ್ರಾಮದ ಹೊಳೆಯ ದಂಡೆಯಲ್ಲಿದ್ದ ರುದ್ರಭೂಮಿ ಕೊಚ್ಚಿಹೋಗಿದ್ದು ಶವಗಳ ಅವಶೇಷಗಳು ತೇಲುತ್ತಿದ್ದ ದೃಶ್ಯ ಕಂಡುಬಂತು.

ಸುವರ್ಣಮುಖಿ ನದಿ ಮತ್ತು ರಾವುತನಹಳ್ಳ ಕೆರೆಯ ಕೋಡಿ ನೀರು ಎರಡೂ ಒಟ್ಟಿಗೆ ಸೇರುವ ಜಾಗದ ಬಳಿ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು ಈ ಈ ಚೆಕ್ ಡ್ಯಾಂ ಭಾರಿ ಮಳೆಗೆ ಒಡೆದು ಹೋಗಿ ಪಕ್ಕದಲ್ಲಿದ್ದ ಸ್ಮಶಾನವು ಕೊಚ್ಚಿ ಹೋಗಿದೆ.

ಸ್ಮಶಾನ ಕೊಚ್ಚಿಹೋದ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತಂಡೋಪ ತಂಡಗಳಾಗಿ ಬಂದು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಷಯ ತಿಳಿದ ಶಾಸಕಿ ಅನಿತಾಕುಮಾರಸ್ವಾಮಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ರುದ್ರಭೂಮಿಯ ಸುತ್ತಲೂ ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಕೃಷ್ಣ, ಎಂ.ಎನ್.ನಾಗರಾಜು, ಕೆ.ಎನ್.ರಾಮು ಇತರರು ಇದ್ದರು

ಎಲ್.ಜಿ.ಜಯರಾಮನಾಯಕ್ ಪಬ್ಲಿಕ್ ನೆಕ್ಸ್ಟ್ ಕನಕಪುರ

Edited By : Nagesh Gaonkar
PublicNext

PublicNext

06/09/2022 08:34 pm

Cinque Terre

80.87 K

Cinque Terre

4