ಬೆಂಗಳೂರು : ರಕ್ಕಸ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದೆ. ವಾಹನ ಸಂಚಾರ ಸ್ತಬ್ಧವಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ಜನರ ಓಡಾಟಕ್ಕೆ ಬ್ರೇಕ್ ಬಿದ್ದಿದೆ.
ಒಟ್ಟಾರೆಯಲ್ಲಿ ಕಾಂಕ್ರೀಟ್ ಕಾಡಿನಲ್ಲಿ ಎಲ್ಲಿ ನೋಡಿದರಲ್ಲಿ ಬರೀ ನೀರು ಆವರಿಸಿದೆ. ರಾಜ ಕಾಲುವೆಗಳು ಮತ್ತು ಚರಂಡಿಗಳಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಸಂಪೂರ್ಣ ಮುಳುಗಡೆಯಾಗಿವೆ. ನಗರದೊಳಗಿನ ಮತ್ತು ಹೊರ ವಲಯದಲ್ಲಿನ ಬಹುಪಾಲು ಕೆರೆಗಳು ಕೋಡಿ ಹರಿದಿದ್ದು, ಮಳೆಯ ರೌದ್ರಾವತಾರಕ್ಕೆ ವಾಹನ ಸವಾರರು ಹೈರಾಣಾಗಿದ್ದಾರೆ.
ಜಲಾವೃತ ರಸ್ತೆಗಳಲ್ಲಿ ಸಂಚರಿಸುವುದೇ ಸಂಕಷ್ಟವಾಗಿದೆ. ಐಶಾರಾಮಿ ಕಾರುಗಳಿದ್ದರು ಜನ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸುವಂತ ಸ್ಥಿತಿ ನಿರ್ಮಾಣವಾಗಿದೆ.ಬೆಂಗಳೂರಿನ ಯಮಲೂರು ಅಂತೂ ಅಕ್ಷರ ಸಹ ಮುಳುಗಡೆಯಾಗಿದ್ದು ಬಸ್ ನಲ್ಲಿ ತೆರಳಬೇಕಿದ್ದ ಜನ ಬೋಟ್ ನಲ್ಲಿ ಪ್ರಯಾಣಿಸುವಂತಾಗಿದೆ. ಸದ್ಯ ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲಸ ಕಾರ್ಯಗಳಿಗೆ ಹೋಗಲು ಹೈರಾಣಾಗಿದ್ದಾರೆ.
PublicNext
06/09/2022 03:53 pm