ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಕಾಕ: ವರುಣಾರ್ಭಟಕ್ಕೆ ಮನೆಗಳು ಜಲಾವೃತ

ಗೋಕಾಕ : ಅರ್ಧ ಗಂಟೆ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಹಾಗೂ ರಸ್ತೆಗಳೆಲ್ಲಾ ಜಲಾವೃತಗೊಂಡು ಮನೆಗಳು ನೀರುಪಾಲಾದ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ವ್ಯಾಪ್ತಿಯ ಮಾಜಿಕವಾಡಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.

ಜಿಲ್ಲೆಯ ಗೋಕಾಕ ತಾಲೂಕಿನ ಮಾನಿವಾಡಿ ಹಾಗೂ ಕೊಣ್ಣೂರು ಗ್ರಾಮದಲ್ಲಿ ಸುಮಾರು ಅರ್ಧ ಗಂಟೆಯವರೆಗೆ ಸುರಿದ ಭಾರಿ ಮಳೆಯಿಂದ ಗುಡ್ಡ ಪ್ರದೇಶದಲ್ಲಿ ಹೊಳೆಯ ರೀತಿ ಭಾರಿ ಪ್ರಮಾಣದ ಮಳೆ ನೀರು ಹರಿದು ಬಂದು ರಸ್ತೆಗಳಲ್ಲವು ನದಿಯಂತಾಗಿವೆ.

ಈ ಸುದ್ದಿ ತಿಳಿದ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಜನರ ರಕ್ಷಣೆಯನ್ನು ಮಾಡಿದ್ದಾರೆ. ಗೋಕಾಕ ತಾಲೂಕಿನ ಕೆಲವು ಗ್ರಾಮಗಳಲ್ಲಿ ಈ ಬೃಹತಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲಾ ನೀರು ತುಂಬಿಕೊಂಡು ವಾಹನ ಸವಾರರು ಕೂಡಾ ತಮ್ಮ ವಾಹನಗಳನ್ನು ನಡೆಸಲು ಪರದಾಡುವಂತಾಗಿದೆ. ಮನೆಗಳಿಂದ ಜನರು ರಕ್ಷಣೆ ಪಡೆಯಲು ಹೊರ ಓಡಿ ಬಂದು ರಸ್ತೆಗಳಲ್ಲಿ ನಿಲ್ಲುವಂತಾ ದೃಶ್ಯಗಳು ಕಂಡು ಬಂದವು.

ಗೋಕಾಕ ಫಾಲ್ಸ್ ನಲ್ಲಿ ಗುಡ್ಡ ಕುಸಿತ: ಒಂದು ಗಂಟೆ ಸುರಿದ ಮಳೆಯಿಂದಾಗಿ ಗೋಕಾಕ ಫಾಲ್ಸ್ ನಲ್ಲಿ ಗುಡ್ಡ ಕುಸಿದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸವದತ್ತಿ ತಾಲೂಕಿನ ನವಿಲುತೀರ್ಥ ಹಾಗೂ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯಗಳೆರಡೂ ಭರ್ತಿಯಾಗಿವೆ.

Edited By : Shivu K
PublicNext

PublicNext

05/09/2022 09:51 pm

Cinque Terre

51.26 K

Cinque Terre

0