ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಹಳ್ಳದ ನೀರಲ್ಲಿ ಸಿಲುಕಿಕೊಂಡ ಲೋಡ್‌ ಬುಲೆರೋ; ಗ್ರಾಮಸ್ಥರಿಂದ ರಕ್ಷಣೆ

ಪಾವಗಡ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡ ಬಾಳೆಹಣ್ಣು ಲೋಡ್‌ ತುಂಬಿ ಹೋಗುತ್ತಿದ್ದ ಬುಲೆರೋ ವಾಹನ, ಗ್ರಾಮಸ್ಥರು ಹರಸಾಹಸದಿಂದ ಕಾರ್ಯಾಚರಣೆ ನಡೆಸಿ ಚಾಲಕ ಮತ್ತು ವಾಹನವನ್ನ ರಕ್ಷಣೆ ಮಾಡಿದ್ದಾರೆ.

ಪಾವಗಡ ತಾಲೂಕಿನ ಕಿಲಾರಹಳ್ಳಿ-ಸಿ.ಕೆ ಪುರ ಸಂಪರ್ಕಿಸುವ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು, ಈ ರಸ್ತೆಯ ಮೂಲಕ ಹಳ್ಳದ ನೀರು ಅತಿ ಹೆಚ್ಚು ರಬಸದಿಂದ ಹರಿಯುತಿತ್ತು. ಇದನ್ನು ಲೆಕ್ಕಿಸದೆ ಬಾಳೆಹಣ್ಣು ತುಂಬಿಕೊಂಡು ಹೋಗುತ್ತಿದ್ದ ಬುಲೆರೋ ಸವಾರ ನಡು ನೀರಿನಲ್ಲಿ ಪ್ರಾಣಾಪಾಯಕ್ಕೆ ಸಿಲುಕಿಕೊಂಡರು.

ಬಳಿಕ ಗ್ರಾಮಸ್ಥರ ಸಹಾಯದಿಂದ ಈ ಬುಲೆರೋವನ್ನ ದಡ ಸೇರಿಸುವಂತಹ ಕಾರ್ಯ ಸ್ಥಳೀಯರು ಮಾಡಿದ್ದು ಈ ಕಾರ್ಯಾಚರಣೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

- ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್,ತುಮಕೂರು.

Edited By : Shivu K
PublicNext

PublicNext

30/08/2022 02:38 pm

Cinque Terre

20.71 K

Cinque Terre

0