ಗದಗ: ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಮೇಲು ಎಂಬ ಮಾತಿಗೆ ಕಂಗೊಳಿಸುತ್ತಿರೋ ಪ್ರಕೃತಿಯ ಸೊಬಗೆ ಸಾಕ್ಷಿ. ಹೌದು... ಉತ್ತರ ಕರ್ನಾಟಕ ಸೈಹ್ಯಾದ್ರಿ ಎಂದೇ ಪ್ರಸಿದ್ಧ ಪಡೆದ ಈ ಕಪ್ಪತ್ತಗುಡ್ಡದ ಸೌಂದರ್ಯ ಒಮ್ಮೆ ನೋಡಿದರೆ ಮತ್ತೇ ಮತ್ತೇ ನೋಡಬೇಕು ಎಂದೇ ಅನಿಸುತ್ತದೆ.
ಹಸಿರು ಸೀರೆಯುಟ್ಟು ಕಂಗೊಳಿಸುತ್ತಿರುವ ಔಷಧೀಯ ಸಸ್ಯಗಳ ಕಾಶಿ ಕಪ್ಪತ್ತಗುಡ್ಡದ ಪ್ರಕೃತಿ ಸೌಂದರ್ಯ ದೃಶ್ಯಗಳು ನೋಡಲು ಎಂತವರು ಒಂದು ಸಲ ಬಂದು ಸೌಂದರ್ಯ ಸವಿ ಬೇಕು ಅನಿಸುತ್ತೆ. ಸದ್ಯ ಯುವ ಜನರು ವೀಕೆಂಡ್ ಪಿಕ್ನಿಕ್ ಗಳನ್ನ ಪ್ಲಾನ್‌ನಲ್ಲಿದ್ದಾರೆ. ಅದ್ರಲ್ಲೂ ಗದಗ ಸುತ್ತಮುತ್ತಲಿನ ಜನ ಕಪ್ಪತಗುಡ್ಡಕ್ಕೆ ವಿಸಿಟ್ ಮಾಡೋದಕ್ಕೆ ಶುರು ಮಾಡಿದ್ದಾರೆ.
ಪಕ್ಕದ ಧಾರವಾಡ ಹುಬ್ಬಳ್ಳಿ, ಕೊಪ್ಪಳ, ಬಾಗಲಕೋಟಿಯಿಂದ ಜನರು ಗುಡ್ಡಕ್ಕೆ ವಿಸಿಟ್ ಮಾಡ್ತಿದಾರೆ. ದೇಶದಲ್ಲಿ ಅತ್ಯುತ್ತಮ ಗಾಳಿ ಹೊಂದಿರೋ ನಗರದಲ್ಲಿ ಗದಗ ಫಸ್ಟ್ ಅಂತಾ ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಪಟ್ಟಿ ಬಿಡುಗಡೆ ಮಾಡ್ತೊ ಅಲ್ಲಿಂದ ಕಪ್ಪತ ಗುಡ್ಡಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.
ಗದಗ ತಾಲೂಕಿನ ಬಿಂಕದಕಟ್ಟೆಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರು ವ್ಯಾಪ್ತಿಯಲ್ಲಿ ಈ ಪರ್ವತ ಸಾಲುಗಳು ಹರಡ್ಕೊಂಡಿವೆ. ಸುಮಾರು 80 ಹೆಕ್ಟೇರ್ ಪ್ರದೇಶವನ್ನ ವ್ಯಾಪಿಸಿರುವ ವನ, ಮಲೆನಾಡ ಸೊಬಗನ್ನು ಸೃಷ್ಟಿಸಿದೆ.. ಕಪ್ಪತಗುಡ್ಡ ತನ್ನ ಔಷಧಿ ಸಸ್ಯಗಳ ಭಂಡಾರದಿಂದಲೇ ಹೆಚ್ಚು ಪ್ರಚಲಿತವಾಗಿದೆ. ಸುಮಾರು 150 ಕ್ಕೂ ವಿವಿಧ ಬಗೆಯ ಔಷಧಿ ಸಸ್ಯಗಳು ಈ ಗುಡ್ಡದಲ್ಲಿ ಲಭ್ಯವಿದೆ.
PublicNext
28/08/2022 04:25 pm