ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿ ಸುಬ್ರಹ್ಮಣ್ಯ ನಾಯ್ಕ ಅವರ ಮನೆಯಲ್ಲಿ ಬಿಳಿ ಹೆಬ್ಬಾವು ಸಿಕ್ಕಿದೆ. ಈ ಅಪರೂಪದ ಬಿಳಿ ಹೆಬ್ಬಾವು ಕಂಡು ಜನರಿಗೆ ಗಾಬರಿ ಹಾಗೂ ಅಚ್ಚರಿ ಎರಡೂ ಆಗಿದೆ, ಬಳಿಕ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪವನ್ ನಾಯ್ಕ ಬಿಳಿ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. ಹೆಬ್ಬಾವು ಬಿಳಿ ಬಣ್ಣವಿರಲು ಕಾರಣ ಮೆಲಾಲಿನ್ ಅಥವಾ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಿಳಿ ಬಣ್ಣ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ. ಬಿಳಿ ಹೆಬ್ಬಾವನ್ನು ರಕ್ಷಣೆ ಮಾಡಿದ ಉರಗ ತಜ್ಞ ಪವನ್ ನಾಯ್ಕ ಅವರು ಅದನ್ನು ಕಾಡಿಗೆ ಬಿಟ್ಟುಬಂದಿದ್ದಾರೆ.
PublicNext
23/08/2022 03:48 pm