ಮೈಸೂರು/ತುಮಕೂರು: ನಮಗೆ ಅರಿವಿಲ್ಲದಂತೆ ಹಾವುಗಳು ನಮ್ಮ ಬೈಕ್‌ನಲ್ಲಿ ಅಡಗಿ ಕೂತಿರುತ್ತವೆ. ನಾವು ಬೈಕ್ ಚಲಾಯಿಸಿಕೊಂಡು ಹಾಯಾಗಿ ಹೊರಟಿರುವಾಗ ಧುತ್ತನೆ ಹೊರಬರುವ ಹಾವುಗಳು ಭುಸುಗುಡುತ್ತವೆ. ಈ ವೇಳೆ ಸಡನ್ನಾಗಿ ಗಾಬರಿ ಬೀಳುವ ಸವಾರರು ಬೈಕ್‌ನಿಂದ ಬಿದ್ದು ಮೈ-ಕೈಗೆ ಪೆಟ್ಟು ಮಾಡಿಕೊಳ್ತಾರೆ.
ಇಂತಹ ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ. ಅಂತಹದ್ದೇ ಎರಡು ಪ್ರತ್ಯೇಕ ಘಟನೆಗಳು ತುಮಕೂರು ಹಾಗೂ ಮೈಸೂರಿನಲ್ಲಿ ನಡೆದಿವೆ. ಆದ್ರೆ ಅದೃಷ್ಟವಶಾತ್ ಇಲ್ಲಿ ಯಾವುದೇ ಅವಘಡಗಳು ಆಗಿಲ್ಲ.
ಮೈಸೂರಿನ ಮಧುವನ ಬಡಾವಣೆಯಲ್ಲಿ ನಿಲ್ಲಿಸಿದ್ದ ಬೈಕ್‌ನ ಹೆಡ್‌ಲೈಟ್ ಭಾಗದಲ್ಲಿ ಹಾವು ಸೇರಿಕೊಂಡಿದೆ. ಬೈಕ್ ಆಚೆ ತೆಗೆಯಲು ಮುಂದಾದಾಗ ಹಾವು ಇರುವುದು ಕಾಣಿಸಿಕೊಂಡಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ರಮೇಶ್ ಬೃಹತ್ ಗಾತ್ರದ ಹಾವನ್ನು ರಕ್ಷಿಸಿದ್ದಾರೆ.
ಇದೇ ರೀತಿ ಮತ್ತೊಂದು ಘಟನೆ ತುಮಕೂರು ನಗರದ ರಂಗಾಪುರದಲ್ಲಿ ನಡೆದಿದೆ. ಬೈಕ್‌ನಲ್ಲಿ ಸೇರಿಕೊಂಡ ಹಾವನ್ನು ಕಂಡ ಮಾಲೀಕ ಶರತ್ ಕೂಡಲೇ ಸ್ನೇಕ್ ದಿಲೀಪ್ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ದಿಲೀಪ್ ಹಾವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
PublicNext
16/08/2022 09:35 pm