ಗದಗ: ಜಿಲ್ಲೆಯಲ್ಲಿ ಮತ್ತೊಮ್ಮೆ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇನ್ನು ಗದಗ-ಬಳ್ಳಾರಿ ಜಿಲ್ಲೆ ಗಡಿ ಅಂಚಿನಲ್ಲಿರೋ ಮದಲಗಟ್ಟಿ ಆಂಜನೇಯ ದೇಗುಲಕ್ಕೆ ಪುನಃ ತುಂಗಭದ್ರೆ ಎಂಟ್ರಿಕೊಟ್ಟಿದೆ. ದೇವಸ್ಥಾನದ ಸುತ್ತಲೂ ನೀರು ಆವರಿಸಿಕೊಂಡಿದೆ. ಆಂಜನೇಯನಿಗೆ ಪೂಜೆ ಸಲ್ಲಿಸಲು ಅರ್ಚಕರು ಹಾಗೂ ಭಕ್ತರು ನೀರಿನಲ್ಲೇ ಹೋಗಿ ದರ್ಶನ ಪಡೆಯುತ್ತಿದ್ದಾರೆ. ನದಿಯ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಆಂಜನೇಯ ದೇವಸ್ಥಾನಕ್ಕೆ ಸದ್ಯ ಜಲದಿಗ್ಬಂಧನವಾಗಿದೆ. ತುಂಗಭದ್ರಾ ಆರ್ಭಟದಿಂದ ನದಿ ತಟದ ವಿಠ್ಠಲಾಪೂರ, ಬಿದರಳ್ಳಿ, ಗುಮ್ಮಗೋಳ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
PublicNext
11/08/2022 12:26 pm