ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ನಿರಂತರ ಮಳೆ- ನಿರ್ಮಾಣ ಹಂತದ ಮನೆಯಲ್ಲಿ ಆಶ್ರಯ ಪಡೆದ ಕರಡಿ.!

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ಕರಡಿಯೊಂದು ಇಡೀ ರಾತ್ರಿ ಕಳೆದಿದೆ.

ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ. ಮಂಜುಳಾ ಪುಟ್ಟರಾಜು ಎಂಬುವರ ನಿರ್ಮಾಣ ಹಂತದ ಮನೆಗೆ ಕರಡಿ ನುಗ್ಗಿದೆ. ಬುಧವಾರ ಬೆಳಿಗ್ಗೆ ಮನೆ ಬಳಿ ಹೋದಾಗ ಮನೆಯಲ್ಲಿ ಕರಡಿ ಮಲಗಿರುವುದನ್ನು ಗಮನಿಸಿದ ಮನೆಯ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಕರಡಿಯನ್ನು ಮನೆಯಿಂದ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Vijay Kumar
PublicNext

PublicNext

03/08/2022 02:29 pm

Cinque Terre

12.67 K

Cinque Terre

0