ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ನಾಗರಪಂಚಮಿ ದಿನ ಶೂನಲ್ಲಿ ಕುಳಿತಿದ್ದ ನಾಗಪ್ಪ; ತಪ್ಪಿದ ಅನಾಹುತ..!

ಶಿವಮೊಗ್ಗ: ಬೆಳಿಗ್ಗೆ ಎದ್ದು ಶಾಲೆಗೆ ಸಿದ್ದರಾಗಬೆಕು ಎಂದುಕೊಂಡಿದ್ದ ಮಕ್ಕಳಿಗೆ ನಾಗರಹಾವು ದರ್ಶನ ನೀಡಿದೆ. ನಾಗರಪಂಚಮಿ ಹಬ್ಬದ ದಿನವೇ ನಾಗಪ್ಪ ದರ್ಶನ ನೀಡಿದ್ದಕ್ಕೆ ಸೌಭಾಗ್ಯ ಎನ್ನಬೇಕೋ.!? ಆತಂಕ ಪಡಬೇಕೋ ಗೊತ್ತಾಗ್ತಿಲ್ಲ ಅಂತಿದ್ದಾರೆ ಜನ. 7ಇಂಚು ಶೂನಲ್ಲಿ 3ಅಡಿ ನಾಗರಹಾವು ಕಾಣಿಸಿಕೊಂಡಿದೆ. ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಕುಮಾರ್ ಎಂಬುವವರ ಮನೆಲಿ ಈ ವಿದ್ಯಮಾನ ನಡೆದಿದೆ.

ಹಾವು ಕಂಡ ಕೂಡಲೇ ಸ್ಥಳೀಯ ಉರಗ ತಜ್ಞ ಸ್ನೇಕ್ ಕಿರಣ್ ಗೆ ಮನೆಯವರು ಮಾಹಿತಿ ನೀಡಿದ್ದಾರೆ‌. ಆಹಾರ, ಕಪ್ಪೆ, ಇಲಿಯನ್ನು ಹಿಂಬಾಲಿಸಿ ನಾಗರಹಾವು ಶೂನಲ್ಲಿ ಬೆಚ್ಚಗೆ ಆಶ್ರಯ ಪಡೆದಿದೆ ಎನ್ನಲಾಗ್ತಿದೆ. ಮಲೆನಾಡಿನ ಶೀತ ವಾತಾವರಣಕ್ಕೆ ಬೆಚ್ಚಗಿನ ಜಾಗ ಹುಡುಕಿ ರೆಸ್ಟ್ ಪಡೆಯುತ್ತಿದ್ದ ನಾಗಪ್ಪ ಎನ್ನಲಾಗ್ತಿದೆ. ಮಳೆಗಾಲದಲ್ಲಿ ಆಹಾರವನ್ನರಸಿ ಬರುವ ಹಾವು ಇಲಿ, ಕಪ್ಪೆ ಚಲನವಲನ ಗಮನಸಿ ಮನೆಗಳತ್ತ ಬರುತ್ತವೆ. ಆದ್ದರಿಂದ ಜನ‌ ಹಾವುಗಳನ್ನು ಕೊಲ್ಲಬೇಡಿ ಅಂತಾರೆ ಸ್ನೇಕ್ ಕಿರಣ್.

ಶೂನಲ್ಲಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಸ್ನೇಕ್ ಕಿರಣ್ ಅರಣ್ಯಕ್ಕೆ ಬಿಟ್ಟಿದ್ದಾರೆ. ಮನುಷ್ಯರು ಸಹ ಹಾವು ವನ್ಯ ಜೀವಿಗಳನ್ನು ಕಂಡರೆ ಮನುಷ್ಯರಂತೆ ಬದುಕಲಿಬಿಡಿ.

Edited By :
PublicNext

PublicNext

02/08/2022 10:22 pm

Cinque Terre

29.45 K

Cinque Terre

0