ಪಾವಗಡ: ಬರದ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಪಾವಗಡ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಬಿದ್ದ ಭಾರೀ ಮಳೆಯಿಂದ ಹಲವು ಕೆರೆಗಳು ಕೋಡಿ ಬಿದ್ದಿದೆ.
ತಾಲೂಕಿನ ಕನ್ನಮೇಡಿ ಕೆರೆ ಈ ವರ್ಷದಲ್ಲಿ ಎರಡನೇ ಬಾರಿ ಒಡೆದಿದ್ದು ಕೆರೆಗೋಡಿಯ ಸಂಪರ್ಕ ಸೇತುವೆ ಮೂಲಕ ಹಾದು ಹೋಗುವಂತಹ ದೇವಯ್ಯನ ಪಾಳ್ಯ ಮತ್ತು ಹನುಮಯ್ಯನ ಪಾಳ್ಯ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಒಂದು ದಶಕದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಮೇಲುಸೇತುವೆ ಆಗಿ ಪರಿವರ್ತಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು ಸಹ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ, ಆದರೆ ಈಗ ಎರಡೂ ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು ಶಾಲಾ-ಕಾಲೇಜಿನ ಮಕ್ಕಳು, ಹೊಟ್ಟೆಪಾಡಿಗಾಗಿ ನಿತ್ಯ ಕೆಲಸಕ್ಕೆ ಹೋಗುವವರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಇನ್ನಾದರೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
-ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್
PublicNext
31/07/2022 10:54 pm