ಮುಂಬೈ: ಮಹಾರಾಷ್ಟ್ರದ ನಾನೆಘಾಟ್‌ನ ಎರಡು ಬೆಟ್ಟಗಳ ನಡುವಿನಿಂದ ಹರಿಯುತ್ತಿರುವ ಈ ಜಲಪಾತ ಹಿಮ್ಮುಖವಾಗಿದೆ. ಝರಿ ನೀರಿಗೆ ಗಾಳಿಯು ಸಾಥ್ ನೀಡುತ್ತಿದ್ದು ಈ ಹಿಮ್ಮುಖ ಜಲಪಾತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಹಿಮ್ಮುಖ ಜಲಪಾತದ ವಿಡಿಯೋ ಟ್ವೀಟ್ ಮಾಡಿರುವ ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ, ಗಾಳಿಯ ವೇಗದ ಪ್ರಮಾಣವು ಗುರುತ್ವಾಕರ್ಷಣೆಯ ಬಲಕ್ಕೆ ಸಮಾನವಾಗಿ ಮತ್ತು ವಿರುದ್ಧವಾಗಿದ್ದಾಗ, ಪಶ್ಚಿಮ ಘಟ್ಟಗಳ ಶ್ರೇಣಿಯ ನಾನೆಘಾಟ್‌ನಲ್ಲಿ ಜಲಪಾತ ಈ ರೀತಿ ಕಾಣುತ್ತದೆ. ಇದು ಮುಂಗಾರಿನ ಸೌಂದರ್ಯ ಎಂದಿದ್ದಾರೆ. ವೈರಲ್ ವಿಡಿಯೊದಲ್ಲಿ ಬೆಟ್ಟಗಳು ಹಸಿರಾಗಿದ್ದು, ಮೇಲೆ ಬಿಳಿ ಮೋಡಗಳು ತೇಲುತ್ತಿರುವುದು ಕಾಣುತ್ತದೆ.
PublicNext
12/07/2022 04:28 pm