ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಗಾಲದಲ್ಲಿ ಶೂ ಧರಿಸುವ ಮುನ್ನ ಇರಲಿ ಎಚ್ಚರ.!

ಹಾವು ಎಂದರೆ ಒಂದು ಕ್ಷಣ ಎದೆ ಜಲ್ ಅನ್ನುತ್ತೆ. ಕೈ ಕಾಲುಗಳು ನಡುಗುತ್ತವೆ. ಹಾವು ಇದೆ ಅಂತ ಗೊತ್ತಾದರೆ ಸಾಕು ತಿರುಗಿ ನೋಡದೆ ಓಡುತ್ತೇವೆ. ಕಾರಣ ಹಾವಿನ ಬಗ್ಗೆ ಇರುವ ಭಯ. ಸದ್ಯ ಮಳೆ ಸುರಿಯುತ್ತಿದ್ದರಿಂದ ಹಾವುಗಳು ಸಹಜವಾಗಿ ಜನ ವಾಸಿಸುವ ಸ್ಥಳಗಳತ್ತ ಕಾಣಿಸಿಕೊಳ್ಳುತ್ತವೆ. ಮನೆ ಹೊರಗೆ ಇರುವ ಶೂಗಳಲ್ಲಿ ಹಾವುಗಳು ಬೆಚ್ಚಗೆ ಮಲಗಿರುತ್ತವೆ. ಹೀಗಾಗಿ ಶೂ ಹಾಕುವ ಮೊದಲು ಎಚ್ಚರಿಕೆಯಿಂದಿರಬೇಕು.

ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಅವರು ಶೂ ಒಳಗೆ ನಾಗರಹಾವು ಅಡಗಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ "ಮಾನ್ಸೂನ್‌ನಲ್ಲಿ ನೀವು ಹಾವುಗಳನ್ನು ಸಂಭವನೀಯ ಸ್ಥಳಗಳಲ್ಲಿ ಕಾಣುವಿರಿ, ಜಾಗರೂಕರಾಗಿರಿ. ತರಬೇತಿ ಪಡೆದ ಉರಗ ರಕ್ಷಕರ ಸಹಾಯವನ್ನು ತೆಗೆದುಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

11/07/2022 06:57 pm

Cinque Terre

80.39 K

Cinque Terre

0

ಸಂಬಂಧಿತ ಸುದ್ದಿ