ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕೊನೆಗೂ ಬೋನಿಗೆ ಬಿದ್ದ ಚಿರತೆ!; ಗ್ರಾಮಸ್ಥರು ನಿಶ್ಚಿಂತೆ

ಕೊರಟಗೆರೆ : ಕಳೆದ ಕೆಲವು ತಿಂಗಳುಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಇಂದು ಬೆಳಗ್ಗೆ ಸೆರೆಯಾಗಿದೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚೀಲಗಾನಹಳ್ಳಿ, ಅಕ್ಕಿರಾಂಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಚಿರತೆಯು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಕುರಿತು ಗ್ರಾಮಸ್ಥರು ನೀಡಿದ್ದ ದೂರಿನ ಮೇರೆಗೆ ಜು. 6ರಂದು ಬೋನು ಇಡಲಾಗಿತ್ತು. ಬೋನು ಇಟ್ಟ ಎರಡೇ ದಿನಕ್ಕೆ ಚಿರತೆ ಬೋನಿಗೆ ಬಿದ್ದಿದೆ.

ಒಟ್ಟಾರೆ ಹಲವು ತಿಂಗಳುಗಳಿಂದ ಗ್ರಾಮಸ್ಥರ ನೆಮ್ಮದಿ ಕಸಿದಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ತಾಲೂಕು ವಲಯ ಅರಣ್ಯಾಧಿಕಾರಿ ಸುರೇಶ್ ಹೆಚ್.ಎಂ. ಅವರು ತಾಲೂಕಿನ ಅಕ್ಕಿರಾಂಪುರ - ಚೀಲಗಾನಹಳ್ಳಿ ಮಧ್ಯೆ ತೊರೆ ಪಕ್ಕ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಿದ್ದರು.

ಅದರಂತೆ ಜು.8ರ ಮಧ್ಯರಾತ್ರಿ ಚಿರತೆಯು ಆಹಾರವನ್ನು ಹುಡುಕಿಕೊಂಡು ಬಂದು ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆಯು ಶೀಘ್ರವಾಗಿ ಸ್ಪಂದಿಸಿ ಕಾರ್ಯಾಚರಣೆಗಿಳಿದು ಸಮಸ್ಯೆ ನಿವಾರಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ರಾಘವೇಂದ್ರ ಡಿ.ಎಂ., ಕೊರಟಗೆರೆ

Edited By :
PublicNext

PublicNext

08/07/2022 04:20 pm

Cinque Terre

86.87 K

Cinque Terre

0