ಹಾಸನ: ಕಾಡಾನೆ ಕಂಡ ಜನ ಗಾಬರಿಯಿಂದ ಕಿರುಚಿದ್ದಾರೆ. ಜನರ ಕಿರಚಾಟ ಕೇಳಿ ತನ್ನ ಮರಿಯೊಂದಿಗೆ ಕಾಡಾನೆಯು ದಿಕ್ಕೆಟ್ಟು ಓಡಿದೆ. ಈ ವೇಳೆ ತನ್ನ ಹಾದಿಗೆ ಅಡ್ಡಲಾಗಿದ್ದ ನಾಮಫಲಕವೊಂದಕ್ಕೆ ಡಿಚ್ಚಿ ಕೊಟ್ಟು ಬೀಳಿಸಿ ಮುನ್ನುಗ್ಗಿದೆ.
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಮಲಸಾವರ ಬಳಿ ಘಟನೆ ನಡೆದಿದೆ. ಮರಿಯೊಂದಿಗೆ ಕಾಫಿ ತೋಟದೊಳಗೆ ಆನೆ ನುಗ್ಗಿದೆ. ಕಾಡಾನೆ ದಿಕ್ಕಾಪಾಲಾಗಿ ಓಡುವ ದೃಶ್ಯ ಸ್ಥಳೀಯರ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ.
PublicNext
29/06/2022 03:50 pm