ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಆನೆಯೊಂದು ಆಹಾರ ತೆಗೆದುಕೊಳ್ಳಲು ಮನೆಯೊಂದರ ಅಡುಗೆ ಮನೆಯ ಗೋಡೆಯನ್ನು ಒಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿ ಜೂನ್ 26ರಂದು ಬೆಳಗಿನ ಜಾವ 2.45ರ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯ ನಿವಾಸಿ ಶಾಮ್ ನಾರಾಯಣ್ ಕೋಣೆಯೊಂದರಲ್ಲಿ ಮಲಗಿದ್ದರು. ಈ ವೇಳೆ ಹಸಿದ ಆನೆ ಆಹಾರ ಅರಸಿ ಬಂದಿದ್ದ ಆನೆ ಅಡುಗೆ ಮನೆಯ ಗೋಡೆ ಒಡೆದು ಆಹಾರ ಪಡೆಯಲು ಹರಸಾಹಸ ಪಟ್ಟಿದೆ. ಆನೆಯು ಅಡುಗೆಮನೆಯ ಮೇಜಿನ ಮೇಲೆ ಸೊಂಡಿಲಿನಿಂದ ಹುಡುಕಾಟ ನಡೆಸಿದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
27/06/2022 07:55 pm