ಕೊಡಗು: ಮಡಿಕೇರಿ ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡಿದ್ದು, ಬೇಸಿಗೆಯಲ್ಲಿ ಮಳೆಯಿಲ್ಲದೆ ಸೊರಗಿದ ಅಬ್ಬಿ ಜಲಪಾತ ಇದೀಗ ಧುಮ್ಮಿಕ್ಕಿ ಹರಿಯುತ್ತಿದೆ. ಈ ಸುಂದರ ದೃಶ್ಯವನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಕೊಡಗಿನಲ್ಲಿ ಹಲವಾರು ಜಲಪಾತಗಳಿದ್ದರೂ, ಕೆ.ನಿಡುಗಣೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಅಬ್ಬಿ (ಅಬ್ಬೇ) ಜಲಪಾತ, ಮಡಿಕೇರಿಗೆ ಸಮೀಪವಿರುವುದರಿಂದ ಪ್ರಮುಖ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಹಾಗೆ ನೋಡಿದರೆ ಮಡಿಕೇರಿಯಲ್ಲಿ ಮಳೆ ಸುರಿದರೆ ಅಬ್ಬಿ ಜಲಪಾತ ಭೋರ್ಗರೆಯುವುದು ಸಹಜ. ಅದಕ್ಕೆ ಕಾರಣವೂ ಇದೆ. ಮಡಿಕೇರಿಯಲ್ಲಿ ಬಿದ್ದ ಮಳೆ ನೀರೆಲ್ಲಾ ಒಟ್ಟಾಗಿ ಹರಿದು ಈ ಜಲಪಾತವನ್ನು ಸೇರುತ್ತದೆ. ಇದೀಗ ಮಳೆ ಬಿರುಸುಗೊಂಡಿರುವುದರಿಂದ ಅಬ್ಬಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಹೆಬ್ಬಂಡೆ ಮೇಲಿಂದ ಧುಮುಕುವ ಸುಂದರ ದೃಶ್ಯ ನೋಡುಗರ ಮನ ತಣಿಸುತ್ತಿದೆ.
PublicNext
25/06/2022 03:14 pm