ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ:ನಾಗರಹಾವಿನ ಜೊತೆ ಯುವಕನ ಆಟ; ಮೈ ಜುಮ್ಮೆನ್ನುತ್ತದೆ ಈ ದೃಶ್ಯ!

ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿ ಮುತ್ತೂರು ಗ್ರಾಮದಲ್ಲಿ ಹಾವಿನ ಜೊತೆ ಯುವಕನ ಆಟ, ಮೈ ಜುಮ್ಮೆನ್ನುತ್ತದೆ ಈ ದೃಶ್ಯ.

ಹೌದು.ನಾಗರಹಾವು ಕಂಡರೆ ಸಾಕು ಅದೆಷ್ಟು ಜನ ಹೆದರಿಕೊಂಡು ಓಡಿಹೋಗುತ್ತಾರೆ. ಎಲ್ಲಿ ಕಚ್ಚಿಬಿಡುತ್ತೆ ಅನ್ನೋ ಭಯ. ಆದರೆ ಇಲ್ಲೊಬ್ಬ ಯುವಕ ಹಾವಿನ ಜೊತೆ ಆಟವಾಡುತ್ತಿದ್ದಾನೆ.

ಸವನೂರು ತಾಲೂಕಿನ ಹತ್ತಿ ಮುತ್ತೂರು ಗ್ರಾಮದಲ್ಲಿ ರೈತರು ಹೊಲದಲ್ಲಿ ಬಿತ್ತನೆ ಕಾರ್ಯ ಮಾಡುವ ವೇಳೆ ನಾಗರಹಾವು ಪ್ರತ್ಯಕ್ಷವಾಗಿದೆ. ನಾಗರಹಾವನ್ನು ನೋಡಿದ ಪ್ರಕಾಶ್ ಎನ್ನುವ ಯುವಕ, ಸ್ವಲ್ಪವೂ ಭಯಪಡದೆ ನಾಗರಹಾವನ್ನು ಕೈಯಲ್ಲಿ ಹಿಡಿದು ಅದರ ಜೊತೆ ಆಟವಾಡುತ್ತಿದ್ದಾನೆ. ಪಕ್ಕದಲ್ಲಿರುವವರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಸುಮಾರು ಎರಡು ನಿಮಿಷಗಳ ಕಾಲ ಯುವಕ ಪ್ರಕಾಶ್, ಹಾವಿನ ಜೊತೆ ಆಟವಾಡಿದ್ದಾನೆ. ಈ ಜಗತ್ತಿನಲ್ಲಿ ಇಂತಹ ಧೈರ್ಯವಂತರು ಇರುತ್ತಾರೆ ಅನ್ನೋದಕ್ಕೆ ಯುವಕನೆ ಸಾಕ್ಷಿ.

Edited By : Nagesh Gaonkar
PublicNext

PublicNext

15/06/2022 12:10 pm

Cinque Terre

52.31 K

Cinque Terre

1