ಮೈಸೂರು: ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸಫಾರಿ ಹೋಗಲು ಅವಕಾಶ ಇದೆ. ಪರಿಸರ ಪ್ರೇಮಿಗಳು ಈ ಜಾಗಕ್ಕೆ ಸಫಾರಿ ಹೋಗುತ್ತ ಇರುತ್ತಾರೆ. ಆದ್ರೆ ನಿನ್ನೆ ಭಾನುವಾರ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಪ್ರವಾಸಿಗರೊಂದಿಗೆ ದರ್ಶನ ಕೊಟ್ಟಿದೆ.
ಆರಂಭದಲ್ಲಿ ಪೊದೆಯ ಮರೆಯಲ್ಲಿ ನಿಂತು ಪೋಸ್ ಕೊಟ್ಟ ಹುಲಿ ನಂತರ ಮುಂದೆ ಬಂದಿದೆ. ಆಮೇಲೆ ಅತ್ತ-ಇತ್ತ ನೋಡಿ ತನ್ನ ಮರಿಗಳೊಂದಿಗೆ ದಾರಿ ದಾಟಿಕೊಂಡು ಮುಂದೆ ಸಾಗಿದೆ. ದಟ್ಟಡವಿಯಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಹುಲಿ ಹಾಗೂ ಹುಲಿಮರಿಗಳನ್ನು ನೋಡಿದ ಪ್ರವಾಸಿಗರು ಪುಳಕಗೊಂಡಿದ್ದಾರೆ.
PublicNext
13/06/2022 01:58 pm