ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಂದರ ಜಾಗ..ಕಡಿದಾದ ರಸ್ತೆ..ಒನ್ ಡೇ ಟ್ರಿಪ್‌ಗೆ ಸೂಪರ್ ಜಾಗ!

ಯಲ್ಲಾಪುರ: ಹುಬ್ಬಳ್ಳಿಯಿಂದ ಹೆಚ್ಚು ಕಡಿಮೆ 100 ಕಿಲೋ ಮೀಟರ್ ದೂರ. ಯಲ್ಲಾಪುರದಿಂದ ಒಂದ್ 23 ಕಿಲೋ ಮೀಟರ್ ದೂರ ಆಗಬಹುದು. ಇಷ್ಟು ದೂರ ಪ್ರಯಾಣದ ಆ ಜಾಗ ಒಂದ್ ಅರೆಕ್ಷಣ ಹೋಗುವ ದಾರಿಯಲ್ಲಿ ಬೇಸರ ಮೂಡಿಸಬಹುದು.ಆದರೆ, ನಿಸರ್ಗದ ಆ ರಮಣೀಯ ದೃಶ್ಯ ನಿಮ್ಮ ಆಯಾಸವನ್ನ ಆ ಕ್ಷಣವೇ ದೂರು ಮಾಡಿ ಬಿಡುತ್ತದೆ.

ಸಾತೊಡ್ಡಿ ಫಾಲ್ಸ್. ಇದು ವೀಕೆಂಡ್ ಪ್ರೇಮಿಗಳಿಗೆ ಒಳ್ಳೆ ಜಾಗ. ಜಾಲಿ ರೈಡಿಂಗ್ ಮಾಡಿಕೊಂಡು ಬರೋರಿಗೂ ಸೂಪರ್ ಪ್ಲೇಸ್. ಕಾಳಿ ನದಿ ಬ್ಯಾಕ್ ವಾಟರ್ ಹರಿದು ಸಾತೊಡ್ಡಿ ಫಾಲ್ಸ್ ಆಗಿ ಇಲ್ಲಿ ಹರೆಯುತ್ತದೆ.

ಸಾತೊಡ್ಡಿ ಫಾಲ್ಸ್ ನಲ್ಲಿ ಸುಳಿಗಳು ಕೂಡ ಇವೆ. ಹೋಗುವ ದಾರಿಯಲ್ಲಿಯೇ ನಿಮಗೆ "ಜಾಗೃತೆ" ಅಂತ ಎಚ್ಚರಿಕೆ ಬೋರ್ಡ್ ಸಿಗುತ್ತದೆ. ಇಂತಹ ಸುಸಜ್ಜಿತ ರೋಡ್ ಈಗ ಇದೆ. ಆದರೆ, 10 ವರ್ಷದ ಹಿಂದೆ ಹೀಗಿರಲಿಲ್ಲ. ಕೆಸರು ಇರುತ್ತಿತ್ತು. ಕಡಿದಾದ ಹಾದಿಯಲ್ಲಿಯೇ ಜನ ಸಾಗಬೇಕಿತ್ತು.

ಸಾತೊಡ್ಡಿ ಫಾಲ್ಸ್ ಎತ್ತರ ಹೆಚ್ಚು ಕಡಿಮೆ 50 ಅಡಿ ಎತ್ತರ ಇದೆ. ಅಲ್ಲಿಂದಲೇ ನೀರು ಹರಿದು ಮುಂದೆ ಸಾಗುತ್ತದೆ. ಹೀಗೆ ಸಾಗೋ ನೀರಿನಲ್ಲಿ ಸ್ನಾನ ಮಾಡೋದೇ ಒಂದು ಖುಷಿ. ಈ ಖುಷಿ ಮುಗಿಸಿಕೊಂಡು ಕೊಂಚ ದೂರ ಬಂದ್ರೆ, ಇದೇ ನೀರಿಗೆ ಅಡ್ಡಲಾಗಿ ಹ್ಯಾಂಗಿಂಗ್ ಬ್ರಿಜ್ ಇದೆ. ಇದು ಕೂಡ ವಿಶೇಷವೇ ಆಗಿದೆ.

ಒಟ್ಟಾರೆ, ಸಾತೊಡ್ಡಿ ಫಾಲ್ಸ್ ಒನ್ ಡೇ ಟ್ರಿಪ್‌ ಗೆ ಒಳ್ಳೆ ಜಾಗ. ಈ ಸ್ಟೋರಿ ನೋಡಿದ್ಮೇಲೆ ನಿಮಗೂ ಇಲ್ಲಿಗೆ ವಿಜಿಟ್ ಕೊಡಬೇಕು ಅನಿಸಿದರೆ, ಟ್ರೈ ಮಾಡಿ..ಎಂಜಾಯ್ ಮಾಡಿ.

-ರೇವನ್ ಪಿ.ಜೇವೂರ್, ಪಬ್ಲಿಕ್ ನೆಕ್ಸಟ್

Edited By : Shivu K
PublicNext

PublicNext

06/06/2022 01:16 pm

Cinque Terre

53.51 K

Cinque Terre

1