ಇತ್ತಿಚೆಗೆ ಭಾರಿ ಮಳೆ ಸುಳಿಗಾಳಿಗೆ ಸಿಲುಕಿ ಆಂಧ್ರ ಪ್ರದೇಶದ ಶ್ರೀಕಾಕುಲಂ ಕಡಲ ತೀರದಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿನ್ನದ ಬಣ್ಣ ಹೋಲುವ ರಥಯೊಂದು ತೇಲಿ ಬಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಎಡೆಮಾಡಿ ಸಖತ್ ವೈರಲ್ ಆಗಿತ್ತು.
ಆ ಸಮಯದಲ್ಲಿ ಒಂದು ವೇಳೆ ಯಾವುದಾದರು ದೇವಸ್ಥಾನ ನೀರಿನ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ತೇಲಿ ಬಂದಿರಬಹುದು ಎಂದು ಅಧಿಕಾರಿಗಳು ಊಹೆಯನ್ನು ಸಹ ವ್ಯಕ್ತಪಡಿಸಿದ್ದರು.
ಆ ಬಳಿಕ ಸಮುದ್ರದಲ್ಲಿ ಕಾಣಿಸಿಕೊಂಡ ದೇವಸ್ಥಾನ ಮಾದರಿಯ ರಥವನ್ನು ದಡಕ್ಕೆ ತಂದು ತಪಾಸಣೆ ಮಾಡಿದ ವೇಳೆ ಈ ರಥ ಭಾರತದೇಶದ್ದಲ್ಲ ದೇಶದಲ್ಲ ಎಂಬ ಸತ್ಯಾಂಶ ತಿಳಿದು ಬಂದಿದೆ.
ಸಮುದ್ರದಲ್ಲಿ ತೇಲಿ ಬಂದ ರಥದ ಮೇಲೆ ನಮ್ಮ ದೇಶದ ಯಾವುದೇ ಭಾಷೆಯನ್ನು ಬಳಸಲಾಗಿಲ್ಲ, ಗೂಗಲ್ ಟ್ರಾನ್ಸಲೇಟರ್ ಬಳಸಿ ಪರಿಶೀಲಿಸಿದಾಗ ರಥ ಮ್ಯಾನ್ಮರ್ ದೇಶದ್ದು ಎಂದು ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ ಮೊದಲು ನಾವು ಇದು ಚಿನ್ನದ ರಥವಿರಬಹುದು ಎಂದು ಬಣ್ಣದ ಲೇಪನದ ನೋಡಿ ಸಂಶಯ ಪಟ್ಟಿದ್ದೇವು, ಆ ನಂತರ ಅಧಿಕಾರಿಗಳ ತಂಡ ಪರಿಶೀಲಿಸಿದ ಮೇಲೆ ಮರದ ಕೆತ್ತನೆಗೆ ಚಿನ್ನದ ಲೇಪನವನ್ನ ಮಾಡಲಾಗಿದೆ ಎಂದು ಅಂಶ ತಿಳಿದು ಬಂದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
PublicNext
18/05/2022 01:58 pm