ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಅರಣ್ಯ ಪ್ರದೇಶದ ರಸ್ತೆ ಮದ್ಯೆ ಹುಲಿಕಾಣಿಸಿ ಕಾಣಿಸಿಕೊಂಡಿದೆ. ಭಕ್ತರು ಬಂಡೀಪುರದ ಹಿಮವದ್ಗೋಪಾಲಸ್ವಾಮಿ ದೇವಾಲಯದ ಪೂಜೆಗೆ ತೆರಳುತ್ತಿದ್ದ ವೇಳೆ ಹುಲಿ ದರುಶನ ಕೊಟ್ಟಿದ್ದು, ಈ ಭಾಗದಲ್ಲಿ ಆಗಾಗ್ಗೆ ಹುಲಿ ಕಾಣಿಸಿಕೊಳ್ತಾನೆ ಇದೆ.ರಸ್ತೆ ಮದ್ಯೆ ನಿಂತಿದ್ದ ಹುಲಿಯನ್ನು ಕಂಡು ಪ್ರವಾಸಿಗರು ಹೌಹಾರಿದ್ದಾರೆ.
ರಸ್ತೆಲಿ ಸಂಚರಿಸುವ ವಾಹನ ಕಂಡು ಹುಲಿರಾಯ ರಸ್ತೆಯಿಂದ ದಿಬ್ಬದ ಮೇಲೇರಿದ್ದು, ದಿಬ್ಬದ ಮೇಲೆ ಕುಳಿತು ಸಖತ್ತಾಗಿ ಪೋಸ್ ಕೂಡ ನೀಡಿದ್ದಾನೆ ಈ ಹುಲಿರಾಯ. ಪ್ರವಾಸಿಗರು ಮಾತ್ರ ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಭಯದಲ್ಲಿ ಸುಮಾರು ಮೂರು ನಿಮಿಷ ವೀಡಿಯೋ ಮಾಡಿಕೊಂಡು ಖುಷಿಪಟ್ಟಿದ್ದಾರೆ.
ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
PublicNext
14/05/2022 12:19 pm