ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರದ ಬಡ್ಗಾಮ್ ನಲ್ಲಿ ಭೀಕರ ಮಳೆ: ಮೂವರು ಕಾರ್ಮಿಕರ ಸಾವು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಬಿರುಗಾಳಿಯಿಂದಾಗಿ ಅನೇಕ ಕಟ್ಟಡಗಳು ಹಾನಿಗೊಳಗಾಗಿವೆ.ವರದಿಗಳ ಪ್ರಕಾರ, ಬಡ್ಗಾಮ್ ನ ಚಂದಪೋರಾ ಗ್ರಾಮದ ಕಾರ್ಮಿಕರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಗೂಡಿನ ಮೇಲೆ ಮೇಘಸ್ಫೋಟ ಸಂಭವಿಸಿದೆ.ಮೃತರನ್ನು ಉತ್ತರ ಪ್ರದೇಶದ ಬರೇಲಿ ನಿವಾಸಿಗಳಾದ ಸಲೀಂ ಮನ್ಸೂರಿ(45), ಕೈಸರ್ ಮನ್ಸೂರಿ(20), ಮತ್ತು ಮೊಹಮ್ಮದ್ ರಯೀಸ್(20) ಎಂದು ಗುರುತಿಸಲಾಗಿದೆ.

Edited By : Nirmala Aralikatti
PublicNext

PublicNext

09/05/2022 10:39 pm

Cinque Terre

36.54 K

Cinque Terre

0

ಸಂಬಂಧಿತ ಸುದ್ದಿ