ಶಿವಮೊಗ್ಗ:ಶಿವಮೊಗ್ಗದ ಚಾಲುಕ್ಯನಗರದ ಮನೆಯೊಂದರ ಅಡುಗೆ ಕೋಣೆಯ ಡ್ರಾನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಬೆಳಿಗ್ಗೆ ಮನೆಯವರು ಕಾಫಿ ಲೋಟ ತೆಗೆಯಲು ಡ್ರಾ ತೆಗೆದಾಗ ಒಳಗೆ ನಾಗರಹಾವು ಕಂಡು ಬೆಚ್ಚಿಬಿದ್ದಿದ್ದಾರೆ. ಮಂಜುನಾಥ್ ಎಂಬಾತರ ಮನೆಯ ಅಡುಗೆ ಕೋಣೆಯಲ್ಲಿ ಹಾವು ಕಾಣಿಸಿಕೊಂಡಿದೆ. ಕೂಡಲೇ ಸ್ನೇಕ್ ಕಿರಣ್ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿದ್ದಾರೆ. ಹಾಗೂ ಮೂರುವರೆ ಅಡಿ ಇರುವ ನಾಗರಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
PublicNext
29/04/2022 05:21 pm