ದಾವಣಗೆರೆ: ನಗರದಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು.ತೆಂಗಿನ ಮರಕ್ಕೆ ಸಿಡಿಲು ಹೊಡೆದ ಪರಿಣಾಮ ಹೊತ್ತಿ ಉರಿದ ಘಟನೆ ಪಿ. ಜೆ. ಬಡಾವಣೆಯಲ್ಲಿ ನಡೆದಿದೆ.
ಪಿ. ಜೆ. ಬಡಾವಣೆಯ ನಾಲ್ಕನೇ ಮುಖ್ಯರಸ್ತೆಯ ಜೈನ್ ಶಾಲೆ ಎದುರುಗಡೆ ವಾಸ ಇರುವ ಶ್ರೀನಿವಾಸ್ ಎಂಬುವವರ ಮನೆ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಧಗಧಗ ಉರಿದಿದೆ.
ಇನ್ನು ಅಕ್ಕಪಕ್ಕದ ಮನೆಯಲ್ಲಿನ ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಭಾರೀ ಗಾಳಿ ಹಾಗೂ ಸಿಡಿಲಿನ ಆರ್ಭಟಕ್ಕೆ ಜನರು ಆತಂಕಕ್ಕೆ ಒಳಗಾಗಿದ್ದರು.ನಂತರ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ಕಪಕ್ಕದ ಮನೆಯವರು ಈ ವೇಳೆ ಹೆದರಿಕೊಂಡಿದ್ದು, ನಮಗೆ ಕರೆ ಮಾಡಿ ಮರಕ್ಕೆ ಬೆಂಕಿ ಬಿದ್ದಿರುವ ವಿಷಯ ತಿಳಿಸಿದರು. ಬೆಸ್ಕಾಂನವರು ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು ಎಂದು ಮನೆಯ ಮಾಲೀಕ ಶ್ರೀಕಾಂತ್ ತಿಳಿಸಿದರು.
PublicNext
29/04/2022 03:38 pm