ದಾವಣಗೆರೆ: ಭಾರೀ ಮಳೆ ಸುರಿದ ಪರಿಣಾಮ ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ ಹಾಗೂ ಕೆಂಗಾಪುರದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆ ಹಾಗೂ ಜಮೀನುಗಳಲ್ಲಿ ನೀರು ನಿಂತಿದ್ದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಶ್ರೀ ರಾಮಲಿಂಗೇಶ್ವರ ಮಠ ಹೊಂದಿರುವ ಹರನಹಳ್ಳಿ, ಕೆಂಗಾಪುರದಲ್ಲಿ ಹರಿಯುವ ಹರಿದ್ರಾವತಿ ನದಿ ಎಂದೆ ಪ್ರಸಿದ್ಧಿ ಪಡೆದಿರುವ ಹಳ್ಳ ರಾತ್ರಿ ಸುರಿದ ಮಳೆಗೆ ಉಕ್ಕಿಹರಿಯುತ್ತಿದೆ.
ಇಲ್ಲಿ ಶ್ರೀ ರಾಮಲಿಂಗೇಶ್ವರ ಮಠವಿದೆ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ತೆರಳಲು ಆಗುತ್ತಿಲ್ಲ. ಗ್ರಾಮೀಣ ಭಾಗದಿಂದ ವಿದ್ಯಾರ್ಥಿಗಳನ್ನು ವಾಹನಗಳ ಮೂಲಕ ಇದೇ ಮಾರ್ಗವಾಗಿ ಕರೆದುಕೊಂಡು ಬರಬೇಕು. ಜೊತೆಗೆ ಅಕ್ಕಪಕ್ಕದ ರೈತರ ಜಮೀನಿನಲ್ಲಿ ನೀರು ನಿಂತಿದ್ದು, ನಷ್ಟ ಅನುಭವಿಸುವಂತಾಗಿದೆ.
PublicNext
24/04/2022 04:36 pm