ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಬರುವ ಹೊತ್ತಲ್ಲಿ ಮೈಮರೆತು ಗರಿಬಿಚ್ಚಿ ಕುಣಿದ ಮಯೂರ: ಅಪರೂಪದ ವಿಡಿಯೋ

ಮಳೆ ಬರುವ ಮುನ್ಸೂಚನೆ ಇದ್ದಾಗ ಹವಾಮಾನ ಬದಲಾವಣೆ ಆಗುವ ಸಮಯವನ್ನು ಮನುಷ್ಯರಷ್ಟೇ ಅಲ್ಲ‌. ಪ್ರಾಣಿ-ಪಕ್ಷಿಗಳೂ ಆಸ್ವಾದಿಸುತ್ತವೆ. ಅದೇ ರೀತಿ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಣುವಿನಕುರಿಕೆ ಆಂಜನೇಯಸ್ವಾಮಿ ದೇವಾಲಯದ ಬಳಿ ನವಿಲೊಂದು ಗರಿ ಬಿಚ್ಚು ನರ್ತಿಸಿದೆ.

ದೇವಾಲಯದ ಮುಂಭಾಗದಲ್ಲಿ ಗರಿ ಬಿಚ್ಚಿ ಕುಣಿದ ನವಿಲಿನ ಅಪರೂಪದ ವಿಡಿಯೋ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ನವಿಲಿನ ಖುಷಿಯ ಕುಣಿತ ಕಂಡು ಆಂಜನೇಯ ಭಕ್ತರು ಪುಳಕಗೊಂಡಿದ್ದಾರೆ.

Edited By : Nagaraj Tulugeri
PublicNext

PublicNext

20/04/2022 01:21 pm

Cinque Terre

66.74 K

Cinque Terre

0