ಬೆಳಗಾವಿ : ಬೆಳಗಾವಿಯಲ್ಲಿ ಇಂದು ಸುರಿದ ಮಳೆ ಸಾಕಷ್ಟು ಅವಾಂತವನ್ನು ಸೃಷ್ಟಿಸಿದೆ. ಸಂಜೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಮರವೊಂದು ಉರಿಳಿ ಬಿದ್ದು ಸುಮಾರು 30 ಬೈಕ್ ಗಳು ಜಖಂಗೊಂಡಿವೆ.
ಇದೇ ವೇಳೆ ಮಳೆ ಬರುತ್ತಿದ್ದಂತೆ ಮರದಡಿ ನಿಂತ ವ್ಯಕ್ತಿಯೋರ್ವನ ಮೇಲೆ ಮರ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಯ ಎದುರಿನ ಮರವೊಂದು ಧರೆಗುರುಳಿದ್ದು ವ್ಯಕ್ತಿಗಳಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಅದೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಅಗ್ನಿಶಾಮಕ ಸಿಬ್ಬಂದಿ ಮರ ತೆರವು ಕಾರ್ಯಚರಣೆ ನಡೆಸಿದ್ದಾರೆ.
PublicNext
19/04/2022 09:06 pm