ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ಳಂಬೆಳಿಗ್ಗೆ ಹಳ್ಳಿಗೆ ಬಂದ ಗಜರಾಜ: ಬೆಚ್ಚಿ ಬಿದ್ದ ಗ್ರಾಮಸ್ಥರು

ಹಾಸನ: ಗ್ರಾಮದೊಳಗೆ ಬೆಳ್ಳಂಬೆಳಿಗ್ಗೆ ಎಂಟ್ರಿಕೊಟ್ಟ ಒಂಟಿ ಸಲಗ ಕಂಡ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೆಲಕಾಲ ಇಡೀ ಗ್ರಾಮದೊಳಗೆ ರಾಜಗಾಂಭೀರ್ಯದ ಹೆಜ್ಜೆ ಹಾಕಿದ ಆನೆ ನಂತರ ಕಾಫಿತೋಟದ ಒಳಗೆ ನುಗ್ಗಿದೆ.

ಗ್ರಾಮದ ಪಾಪಣ್ಣ ಎಂಬುವರ ಮನೆ ಮುಂದೆ ಕೆಲ ಕಾಲ‌ ನಿಂತಿದ್ದ ಆನೆ ನಂತರ ಅಲ್ಲಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದೆ. ಇನ್ನು ಭಯಭೀತರಾದ ಸ್ಥಳೀಯರು ಮನೆಯ ಮಹಡಿ ಮೇಲೆ ನಿಂತು ಆನೆಯ ಚಲನವಲನಗಳನ್ನು ವೀಕ್ಷಿಸಿದ್ದಾರೆ. ಇನ್ನು ಕೆಲವರು ಆನೆ ನಡೆದಾಡುವ ದೃಶ್ಯಗಳನ್ನು ಮೊಬೈಲ್‌ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ.

Edited By : Shivu K
PublicNext

PublicNext

23/03/2022 11:03 am

Cinque Terre

35.14 K

Cinque Terre

0

ಸಂಬಂಧಿತ ಸುದ್ದಿ