ಟೋಕಿಯೋ: ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ಸಂಜೆ 7.3 ತೀವ್ರತೆಯ ಭೂಕಂಪ ವರದಿಯಾಗಿದೆ. ಇದರ ಬೆನ್ನಲ್ಲಿಯೇ ಜಪಾನ್‌ನ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆಯನ್ನೂ ನೀಡಿದೆ.
ಭೂಕಂಪದ ಕೇಂದ್ರಬಿಂದು ಜಪಾನ್‌ನ ಟೋಕಿಯೊದಿಂದ 297 ಕಿ.ಮೀ ಈಶಾನ್ಯಕ್ಕೆ ಇದೆ. ಎಂದು ವರದಿಯಾಗಿದೆ. ಸಮುದ್ರದಿಂದ 60 ಕಿಲೋಮೀಟರ್ ಆಳದಲ್ಲಿ ಅಪ್ಪಳಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇನ್ನು ಭೂಕಂಪದ ಪ್ರಮಾಣಕ್ಕೆ 2 ಮಿಲಿಯನ್ ಮನೆಗಳು ವಿದ್ಯುತ್ ಕಳೆದುಕೊಂಡಿದೆ ಎಂದು ಸರ್ಕಾರ ತಿಳಿಸಿದೆ.
PublicNext
16/03/2022 09:24 pm