ದಾಂಡೇಲಿ : ದಾಂಡೇಲಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಪಟೇಲ್ ನಗರದಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಸುಮಾರು ಆರು ಅಡಿ ಉದ್ದದ ಮೊಸಳೆ ಕಾಣಿಸಿಕೊಂಡು ಕೆಲಕಾಲ ಆತಂಕಕ್ಕೆ ಕಾರಣವಾಯಿತು.
ದೈತ್ಯಾಕಾರದ ಮೊಸಳೆಯು ಕಾಳಿ ನದಿ ನೀರು ಬಿಟ್ಟು ಬಸ್ ನಿಲ್ದಾಣದ ಹತ್ತಿರ ಪಟೇಲ್ ನಗರದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯವರು ಸಾರ್ವಜನಿಕರ ಸಹಕಾರದೊಂದಿಗೆ ಮೊಸಳೆಯನ್ನ ಹಗ್ಗದಿಂದ ಕಟ್ಟಿಹಾಕಿ ನೀರಿಗೆ ಬಿಡುವ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪಟೇಲ್ ನಗರದ ವ್ಯಾಪ್ತಿಯಲ್ಲಿ ಕಳೆದ ತಿಂಗಳು ಯುವಕನ ಮೇಲೆ ಮೊಸಳೆ ದಾಳಿ ಮಾಡಿತ್ತು. ಅದೇ ಸ್ಥಳದ ಸಮೀಪದಿಂದ ಮೊಸಳೆ ಹೊರಬಂದಿರುವ ಕಾರಣ ಜನರಲ್ಲಿ ಆತಂಕ ಮನೆ ಮಾಡಿದೆ.
ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ಅಳ್ನಾವರ
PublicNext
10/03/2022 06:09 pm