ಪಶ್ಚಿಮಬಂಗಾಳ: ಮರಿ ಆನೆಯೊಂದು ಕಂದಕಕ್ಕೆ ಬಿದ್ದಿದೆ. ಆದರೆ ಇದನ್ನ ಹೊರಗಡೆ ತೆಗೆಯೋದು ಹೇಗೆ ? ಈ ಪ್ರಶ್ನೆ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಐಡಿಯಾ ಮಾಡಿದ್ದಾರೆ. ಇದು ತುಂಬಾ ಹಳೆ ಐಡಿಯಾನೇ. ಆದರೆ ಇಲ್ಲಿ ಇದು ವರ್ಕೌಕ್ ಆಗಿದೆ. ಅದೇ ವೀಡಿಯೋನೆ ಈಗ ವೈರಲ್ ಕೂಡ ಆಗಿದೆ.
ಪಶ್ಚಿಮಬಂಗಾಳದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮರಿಯನ್ನ ಕಂದಕ್ಕದಿಂದ ಹೊರಗಡೆ ತೆಗೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಊರ ಜನರ ಸಹಾಯವೂ ಅತಿ ಹೆಚ್ಚಿದೆ.
ಆದರೆ ಇಲ್ಲಿ ಬಳಸಿರೋ ತಂತ್ರ ಸಿಂಪಲ್ ಆಗಿಯೇ ಇದೆ. ಆನೆ ಮರಿ ಬಿದ್ದ ಗುಂಡಿಗೆ ನೀರು ತುಂಬಿಸಿದ್ದಾರೆ. ಇಡೀ ಕಂದಕ ನೀರಿನಿಂದ ತುಂಬಿದ ಮೇಲೆ ಆನೆಯನ್ನ ಸಿಬ್ಬಂದಿ ಹಗ್ಗದ ಸಹಾಯದಿಂದ ಹೊರಗಡೆ ಎಳೆದು ಹಾಕಿದ್ದಾರೆ.
ಅಂದ್ಹಾಗೆ ಇದು ಆರ್ಕಿಮಿಡಿಸ್ ತತ್ವ. ಇದನ್ನೇ ಅರಣ್ಯ ಸಿಬ್ಬಂದಿ ಆನೆಮರಿಯನ್ನ ಗುಂಡಿಯಿಂದ ಹೊರ ತೆಗೆಯಲು ಬಳಸಿದ್ದಾರೆ.
PublicNext
23/02/2022 05:11 pm